ಮಡಿಕೇರಿ: ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆ ವೇಳೆ ಮಂಟಪವೊಂದರ ಟ್ರಾಕ್ಟರ್ ಮುಗುಚಿ ಬಿದ್ದಿದ್ದು, ಮೂವರಿಗೆ ಗಾಯಗಳಾಗಿವೆ.

ಶೋಭಾಯಾತ್ರೆ ಆರಂಭವಾದ ಬಳಿಕ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಸಮಿತಿಯ ಮಂಟಪವು ದೇಗುಲದಿಂದ ಮೆರವಣಿಗೆಯಲ್ಲಿ ಹೊರಟಿತು. ಡಿಸಿಸಿ ಬ್ಯಾಂಕ್ ಸಮೀಪ ಇಳಿಜಾರಿನ ರಸ್ತೆಯಲ್ಲಿ ಮಂಟಪ ಇರಿಸಲಾಗಿದ್ದ ಟ್ರಾಕ್ಟರ್ ಬುಧವಾರ ನಸುಕಿನ 3.30 ರ ವೇಳೆ ಮುಗುಚಿತು. ಇದರಿಂದ ಮೂವರಿಗೆ ಗಾಯಗಳಾಗಿವೆ. ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಸ್ಥಳದಲ್ಲಿ ಅಪಾರ ನೂಕುನುಗ್ಗಲು ಉಂಟಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರು ಪರದಾಡಿದರು.

ಈ ಕುರಿತು ಪ್ರತಿಕ್ರಿಯಿಸಿದ ದೇಗುಲ ಸಮಿತಿಯ ಸದಸ್ಯರೊಬ್ಬರು ದೇಗುಲದ ಸಮೀಪ ಹಾಗೂ ಮೆರವಣಿಯಲ್ಲಿ ಒಟ್ಟು ಎರಡು ಪ್ರದರ್ಶನ ನೀಡಿದ್ದೆವು. ನಸುಕಿನ 4 ಗಂಟೆಗೆ ತೀರ್ಪುಗಾರರ ಮುಂದೆ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಆ ಸ್ಥಳ ತಲುಪುವ ಮುನ್ನ ಟ್ರಾಕ್ಟರ್ ಮುಗುಚಿತು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.