ಸಭೆಯ ಬಳಿಕ ಸಮಿತಿಯವರೊಂದಿಗೆ ಮಾತನಾಡಿದ ಶಾಸಕ ಡಾ.ಮಂತರ್‌ಗೌಡ ‘ಸದ್ಯದಲ್ಲಿಯೇ ನನ್ನ ಶಾಸಕ ನಿಧಿಯಿಂದಲೂ ಸೇರಿದಂತೆ ಮತ್ತಿತರ ಮೂಲಗಳಿಂದ ಹಣ ಒದಗಿಸಿ ಪ್ರಾರಂಭಿಕವಾಗಿ ಅಗತ್ಯವಾಗಿರುವ ₹ 1.50 ಕೋಟಿ ವೆಚ್ಚದ ಸಮುದಾಯ ಭವನ ನಿರ್ಮಾಣವನ್ನು ಕೈಗೆತ್ತಿಕೊಳ್ಳೋಣ. ನಾನೆಂದಿಗೂ ಈ ಐತಿಹಾಸಿಕ ದೇವಾಲಯಗಳ ಅಭಿವೃದ್ಧಿ ಕಾರ್ಯದಲ್ಲಿ ನಿಮ್ಮೊಂದಿಗಿದ್ದೇನೆ’ ಎಂದು ಭರವಸೆ ನೀಡಿದರು.