ಮಡಿಕೇರಿ: ವಕೀಲ ವೃತ್ತಿಯ ಘನತೆಯನ್ನು ಸದಾ ಎತ್ತರದಲ್ಲಿರುವಂತೆ ಪ್ರತಿಯೊಬ್ಬ ವಕೀಲರೂ ಗಮನಹರಿಸಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು.

ನಗರದ ಹೊರವಲಯದಲ್ಲಿನ ಖಾಸಗಿ ರೆಸಾರ್ಟ್ನಲ್ಲಿ ಮಡಿಕೇರಿ ವಕೀಲರ ಸಂಘದ ವತಿಯಿಂದ ಮಂಗಳವಾರ ನಡೆದ ವಕೀಲರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಯುವಪೀಳಿಗೆಯ ವಕೀಲರಿಗೆ ಹಿರಿಯ ವಕೀಲರು ಪ್ರೋತ್ಸಾಹ ನೀಡುವ ಮಾರ್ಗದರ್ಶಿಗಳಾಗಬೇಕು ಎಂದರು.

ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎನ್.ದೇವದಾಸ್ ಮಾತನಾಡಿ, ‘75 ವರ್ಷಗಳನ್ನು ಪೂರೈಸಿರುವ ದೇಶದ ಸಂವಿಧಾನ ಅಪಾಯದಲ್ಲಿದೆ ಎಂಬ ಕೂಗು ಕೇಳಿಬಂದಿರುವ ಈ ಕಾಲಘಟ್ಟದಲ್ಲಿ, ವಕೀಲರು ಸಂವಿಧಾನದ ಸಂರಕ್ಷರಾಗುವತ್ತ ಮುಂದಡಿ ಇರಿಸಬೇಕು’ ಎಂದು ತಿಳಿಸಿದರು.

ಮಡಿಕೇರಿ ನ್ಯಾಯಾಲಯಕ್ಕೆ ₹ 1,30 ಕೋಟಿ ಮೊತ್ತದ ತಡೆಗೋಡೆ ಕಾಮಗಾರಿಗೆ ಸರ್ಕಾರದಿಂದ ಮಂಜುರಾತಿ ಕೊಡಿಸುವಂತೆ ವಕೀಲರ ಸಂಘದ ವತಿಯಿಂದ ಅಧ್ಯಕ್ಷ ನಿರಂಜನ್ ಅವರು ಪೊನ್ನಣ್ಣ ಅವರಿಗೆ ಮನವಿ ಪತ್ರ ನೀಡಿದರು.

ಮಡಿಕೇರಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಂ.ಕೇಶವ, ಉಪಾಧ್ಯಕ್ಷ ಎಂ.ಪಿ.ನಾಗರಾಜ್, ಖಜಾಂಜಿ ಜಿ.ಆರ್.ರವಿಶಂಕರ್, ಉಪಾಧ್ಯಕ್ಷ ಪವನ್ ಪೆಮ್ಮಯ್ಯ, ಎಂ.ಆರ್ ಜಿತೇಂದ್ರ, ಕಪಿಲ್ ಕುಮಾರ್ ಭಾಗವಹಿಸಿದ್ದರು. ವಕೀಲರ ಸಾಧಕ ಮಕ್ಕಳಿಗೆ ಬಹುಮಾನ ಮತ್ತು ಕ್ರೀಡಾಕೂಟದಲ್ಲಿ ವಿಜೇತರಾದ ವಕೀಲರಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.