ಶನಿವಾರಸಂತೆ: ಇಲ್ಲಿಗೆ ಸಮೀಪದ ಮುಳ್ಳೂರು ಗ್ರಾಮದ ಬಸವೇಶ್ವರಸ್ವಾಮಿ ದೇವರ ವಾರ್ಷಿಕ ಪೂಜಾ ಮಹೋತ್ಸವ ಮಂಗಳವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.

ಗ್ರಾಮದ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ 6 ಗಂಟೆಗೆ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ಮೂರ್ತಿಯನ್ನು ಅಡ್ಡಪಲ್ಲಕಿಯಲ್ಲಿ ಕೂರಿಸಿ ಮುಳ್ಳೂರು ಜಂಕ್ಷನ್ನಲ್ಲಿರುವ ಅರಳಿಕಟ್ಟೆಗೆ ತರಲಾಯಿತು. ನಂತರ, ಅರಳಿಕಟ್ಟೆಯಲ್ಲಿ ಕಳಸಪೂಜೆ ಸಲ್ಲಿಸಿ ಕಳಸಹೊತ್ತ ಮಹಿಳೆಯರು, ಭಕ್ತಾದಿಗಳು, ಗ್ರಾಮಸ್ಥರು ಮಂಗಳವಾದ್ಯದೊಂದಿಗೆ ಹೆಜ್ಜೆ ಹಾಕಿದರು. ಬಸವೇಶ್ವರಸ್ವಾಮಿ ಅಡ್ಡಪಲ್ಲಕ್ಕಿ ಮೆರವಣಿಗೆ ದೇವಸ್ಥಾನ ತಲುಪಿದ ಬಳಿಕ ಅರ್ಚಕರು ದೇವಸ್ಥಾನದಲ್ಲಿ ಬಸವೇಶ್ವರಸ್ವಾಮಿಗೆ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ರಾತ್ರಿ 9 ಗಂಟೆಯಿಂದ ಮಂಗಳವಾರ ಮುಂಜಾನೆ 5 ಗಂಟೆವರೆಗೆ ಬಸವೇಶ್ವರ ಸ್ವಾಮಿಯ ವಾರ್ಷಿಕ ಪೂಜಾ ಮಹೋತ್ಸವ ನಡೆಯಿತು. ತದನಂತರ ಬೆಳಿಗ್ಗೆ 6 ಗಂಟೆಗೆ ದೇವಸ್ಥಾನದ ಮುಂಭಾಗ ಕೆಂಡಕೊಂಡೋತ್ಸವದೊಂದಿಗೆ ವಾರ್ಷಿಕ ಪೂಜ ಮಹೋತ್ಸವ ಸಂಪನ್ನಗೊಂಡಿತು,.

ಅರ್ಚಕ ಶಾಂತರಾಜ್ ನೇತೃತ್ವದಲ್ಲಿ ಅರ್ಚಕರ ತಂಡ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.