ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ: ನಂಜುಂಡೇಶ್ವರ, ಕನ್ನಂಬಾಡಿಯಮ್ಮ ಜಾತ್ರೆ

Published 24 ಏಪ್ರಿಲ್ 2024, 4:31 IST
Last Updated 24 ಏಪ್ರಿಲ್ 2024, 4:31 IST
ಅಕ್ಷರ ಗಾತ್ರ

ಕುಶಾಲನಗರ: ಇಲ್ಲಿನ ನಂಜರಾಯಪಟ್ಟಣ ಗ್ರಾಮದ ಪುರಾತನ ದೇವಾಲಯ ವಾಸ್ತುಶಿಲ್ಪಾಧಾರಿತ ನಂಜುಂಡೇಶ್ವರ ದೇವರ ವಾರ್ಷಿಕ ಉತ್ಸವ ಮತ್ತು ಜಾತ್ರೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.

 ದೇವಾಲಯ ಸಮಿತಿಯಿಂದ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವದೊಂದಿಗೆ ಕನ್ನಂಬಾಡಿಯಮ್ಮ, ಬಸವೇಶ್ವರ ಹಾಗೂ ವೀರಭದೇಶ್ವರ ಸ್ವಾಮಿ ದೇವರ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಮಂಗಳವಾರ ಸೂರ್ಯೋದಯಕ್ಕೂ ಮುನ್ನ ದೇವರಿಗೆ ಮಹಾರುದ್ರಾಭಿಷೇಕ ನೆರವೇರಿಸಲಾಯಿತು.
ನಂತರ ದುಬಾರೆ ಬಳಿ ಕಾವೇರಿ ನದಿಯಲ್ಲಿ ದೇವರ ವಿಗ್ರಹಗಳಿಗೆ ಗಂಗಾಸ್ನಾನ ಹಾಗೂ ಗಂಗಾಪೂಜೆ ನೆರವೇರಿಸಲಾಯಿತು.

ಬಳಿಕ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ಅಡ್ಡಪಲ್ಲಕ್ಕಿಯಲ್ಲಿ ದೇವರ ವಿಗ್ರಹ ಪ್ರತಿಷ್ಠಾಪಿಸಿ ಮಂಗಳಾರತಿ ನಂತರ  ಉತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವದಲ್ಲಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬಸವಜ್ಯೋತಿ ಮಠದ ಅಪ್ಪಾಜಿ ಸ್ವಾಮೀಜಿ ಸ್ವಾಮಿ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಆಚರಣೆಗಳು ಹಾಗೂ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.

ಉತ್ಸವದ ಮೆರವಣಿಗೆ ಸಂದರ್ಭ ವೀರಭದ್ರೇಶ್ವರ ವೀರಗಾಸೆ ನೃತ್ಯ ನೆರೆದಿದ್ದ ಭಕ್ತರ ಗಮನ ಸೆಳೆಯಿತು. ಉತ್ಸವಗಳು ಬೆಂಕಿಕೊಂಡ ಹಾಯ್ದು ದೇವಾಲಯ ಪ್ರದಕ್ಷಿಣೆ ನಡೆಸಿದರು. ಅರ್ಚಕ ಎಸ್.ಪಿ.ಅಪ್ಪಣ್ಣ ದೇವರ ವಿಗ್ರಹಕ್ಕೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ ಮಹಾ ಪೂಜೆ ಹಾಗೂ ಮಹಾ ಮಂಗಳಾರತಿ ನೆರವೇರಿಸಿದರು.

 ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಎನ್.ಕೆ.ಮೋಹನಕುಮಾರ್, ಉಪಾಧ್ಯಕ್ಷ ಕೆ.ಜಿ.ಲೋಕನಾಥ್, ಕಾರ್ಯದರ್ಶಿ ಕೆ.ವಿ.ಪ್ರೇಮಾನಂದ, ಸಹಕಾರ್ಯದರ್ಶಿ ಕೆ.ಎಸ್.ರತೀಶ್, ಖಜಾಂಚಿ ಮುರುಳಿ ಮಾದಯ್ಯ, ಪ್ರಮುಖರಾದ ಕೆ.ಸಿ.ಕಾರ್ಯಪ್ಪ, ಟಿ.ಕೆ.ರಘು, ಕೆ.ಪಿ.ಲೀಲಾವತಿ, ಬಿ.ಸಿ.ಕಾಳಯ್ಯ, ಆಶೀಶ್ ಅಪ್ಪಣ್ಣ, ಗ್ರಾ.ಪಂ.ಅಧ್ಯಕ್ಷ ಸಿ.ಎಲ್.ವಿಶ್ವ, ಮೊದಲಾದವರಿದ್ದರು.

ಪೂಜೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ಪುಷ್ಪಗಳಿಂದ ಹಾಗೂ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ನಂಜರಾಯಪಟ್ಟಣ ಸುತ್ತಲಿನ ಗಿರಿಜನ ಹಾಡಿಗಳಲ್ಲಿ ನೆಲೆಸಿರುವ ಗಿರಿಜನ ನಿವಾಸಿಗಳು ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು. ದೇವಾಲಯ ಸಮಿತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT