ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಗೇರಿಯಲ್ಲಿ ಪರದೇವರ ಗುಡಿ ಪುನರ್‌ ಪ್ರತಿಷ್ಠೆ

Published 25 ನವೆಂಬರ್ 2023, 5:46 IST
Last Updated 25 ನವೆಂಬರ್ 2023, 5:46 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಬಿಳಿಗೇರಿ ಗ್ರಾಮದಲ್ಲಿ ಶುಕ್ರವಾರ ಪರದೇವರ ಗುಡಿಯ ಪ್ರನರ್ ಪ್ರತಿಷ್ಠಾ ಕಾರ್ಯಕ್ರಮ ಶ್ರದ್ಧಾ, ಭಕ್ತಿಯಿಂದ ನೆರವೇರಿತು.

ಗುರುವಾರದಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳು ಇಲ್ಲಿ ಆರಂಭವಾಗಿದ್ದವು. ಶುಕ್ರವಾರ 6 ತೆಂಗಿನಕಾಯಿ ಗಣಪತಿ ಹೋಮ, ಸಪ್ತಶತಿ ಪಾರಾಯಣ, ನವಕ ಕಳಸ ಪ್ರತಿಷ್ಠೆ, ಕಳಸ ಪೂಜೆಗಳು ನಡೆದ ನಂತರ ಧನುರ್ ಲಗ್ನದಲ್ಲಿ ಪರದೇವರ ಮೊಗ ಹಾಗೂ ಆಯುಧಗಳ ಪ್ರತಿಷ್ಠೆ ನಡೆಯಿತು. ಜತೆಗೆ, ದುರ್ಗಾ ಹೋಮ, ಕಳಸಾಭಿಷೇಕ, ಮಹಾಪೂಜೆಗಳು ನಡೆದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ನೂರಾರು ಮಂದಿ ಈ ಉತ್ಸವದಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT