ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2022ರ ವರ್ಷಾಂತ್ಯಕ್ಕೆ ಹೋಲಿಸಿದರೆ 2023ರ ವರ್ಷಾಂತ್ಯದಲ್ಲಿ ಮದ್ಯ ಮಾರಾಟ ತಗ್ಗಿದೆ. ಮಾತ್ರವಲ್ಲ, ಅಬಕಾರಿ ವಿಭಾಗ ವ್ಯಾಪ್ತಿಯ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಅತಿ ಕಡಿಮೆ ಮದ್ಯ ಮಾರಾಟವಾಗಿದೆ. ವಿಶೇಷ ಎಂದರೆ, ರಾಜ್ಯದಲ್ಲೇ ಕೊಡಗು ಜಿಲ್ಲೆ ಮದ್ಯ ಮಾರಾಟದಲ್ಲಿ 12ನೇ ಸ್ಥಾನದಲ್ಲಿದೆ.

ಕೊಡಗಿನಲ್ಲಿ ವರ್ಷಾಂತ್ಯಕ್ಕೆ ಬರುವುದೇ ಮದ್ಯ ಸೇವನೆಗೆ ಎಂಬ ಹೊರ ಜಿಲ್ಲೆಯಲ್ಲಿರುವ ಸಾಮಾನ್ಯ ಅಭಿಪ್ರಾಯವನ್ನು ಅಬಕಾರಿ ಇಲಾಖೆಯ ಅಂಕಿ ಅಂಶಗಳು ಸುಳ್ಳೆಂದು ಸಾಬೀತುಪಡಿಸಿವೆ. ಕೊಡಗು ಜಿಲ್ಲೆಗೆ ಸಂಸಾರ ಸಮೇತರಾಗಿ ಬರುವ ಪ್ರವಾಸಿಗರು ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಒಟ್ಟು 256 ಮದ್ಯದಂಗಡಿಗಳು ಇವೆ. ತಾಲ್ಲೂಕುಗಳ ಪೈಕಿ ಪೊನ್ನಂಪೇಟೆ ತಾಲ್ಲೂಕನ್ನು ಒಳಗೊಂಡ ವಿರಾಜಪೇಟೆ ತಾಲ್ಲೂಕಿನಲ್ಲೇ ಅತ್ಯಧಿಕ 37,295 ಮದ್ಯದ ಬಾಕ್ಸ್ಗಳು ಮಾರಾಟವಾಗಿವೆ. ಬಿಯರ್ನಲ್ಲಿ 18,404 ಬಾಕ್ಸ್ ಮಾರಾಟವಾಗಿರುವ ಸೋಮವಾರಪೇಟೆ ತಾಲ್ಲೂಕು ಮೊದಲ ಸ್ಥಾನದಲ್ಲಿದೆ.

ವರ್ಷಾಂತ್ಯದ ದಿನವಾದ ಡಿಸೆಂಬರ್ 31ರಂದು ಒಟ್ಟು 7,912 ಬಾಕ್ಸ್ನಷ್ಟು ಮದ್ಯ ಹಾಗೂ 4,126 ಬಿಯರ್ ಬಾಕ್ಸ್ಗಳು ಮಾರಾಟವಾಗಿವೆ.

2022ರ ಡಿಸೆಂಬರ್ಗೂ 2023ರ ಡಿಸೆಂಬರ್ಗೂ ಹೋಲಿಸಿದರೆ, ವರ್ಷಾಂತ್ಯದ ಡಿಸೆಂಬರ್ನಲ್ಲಿ 1,052 ಬಾಕ್ಸ್ನಷ್ಟು ಕಡಿಮೆ ಮದ್ಯ ಹಾಗೂ 3,923 ಬಾಕ್ಸ್ನಷ್ಟು ಬಿಯರ್ ಮಾರಾಟದಲ್ಲಿ ಕಡಿಮೆಯಾಗಿದೆ.

ಇದರಿಂದ ಅಬಕಾರಿ ಇಲಾಖೆಯು ಸರ್ಕಾರ ನಿಗದಿಪಡಿಸಿರುವ ಗುರಿಯನ್ನು ತಲುಪಲಾಗಿಲ್ಲ. ಇನ್ನೂ 13,039 ಬಾಕ್ಸ್ನಷ್ಟು ಮದ್ಯ ಮಾರಾಟವಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.