ಕುಶಾಲನಗರ: ‘ಬ್ರೈನ್ ಟ್ಯೂಮರ್ ಸಮಸ್ಯೆ ಎದುರಿಸುತ್ತಿರುವ ನನಗೆ ಸೂಕ್ತ ಚಿಕಿತ್ಸೆಗೆ ಆರ್ಥಿಕ ಸಹಕಾರದ ಅಗತ್ಯವಿದ್ದು, ಸಂಘ, ಸಂಸ್ಥೆಗಳು ಹಾಗೂ ದಾನಿಗಳು ಯಾವುದೇ ರೂಪದಲ್ಲಿ ಆಸರೆಯಾಗಬೇಕು’ ಎಂದು ಉರಗ ಹಾಗೂ ವನ್ಯಜೀವಿ ಸಂರಕ್ಷಕ ಕೂಡುಮಂಗಳೂರು ಗ್ರಾಮದ ಅಬ್ದುಲ್ ಗಫಾರ್ ಮನವಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ 25 ವರ್ಷಗಳಿಂದ ಉರಗಗಳು ಸೇರಿದಂತೆ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕುಶಾಲನಗರ, ಕೂಡಿಗೆ, ಕೂಡುಮಂಗಳೂರು ವ್ಯಾಪ್ತಿ ಮಾತ್ರವಲ್ಲದೆ, ನೆರೆಯ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಅನೇಕರಿಗೆ ಉರಗ ಸಂರಕ್ಷಕರೆಂದು ಪರಿಚಿತನಾಗಿದ್ದು, ಸಾರ್ವಜನಿಕರ ಮನೆ, ಜಾಗಗಳಲ್ಲಿ ಕಾಣಿಸಿಕೊಂಡಿದ್ದ ಸಾವಿರಾರು ಹಾವುಗಳನ್ನು ಜೀವಂತವಾಗಿ ಕಾಡಿಗೆ ಬಿಡುವ ಕೆಲಸವನ್ನು ಮಾಡಿದ್ದೇನೆ. ಐದು ಬಾರಿ ನಾಗರಹಾವು ಕಚ್ಚಿ ಪ್ರಾಣ ಉಳಿಸಿಕೊಂಡಿದ್ದೇನೆ. ಒಂದು ವರ್ಷದ ಹಿಂದೆ ಮತ್ತೆ ನಾಗರಹಾವು ಕಚ್ಚಿ ಮಡಿಕೇರಿ ಆಸ್ಪತ್ರೆಯಲ್ಲಿ ದಾಖಲಾದೆ. ಅಲ್ಲಿನ ವೈದ್ಯರ ಸೂಚನೆಯಂತೆ ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದೆ. ಆದರೆ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ಕುಶಾಲನಗರದ ವೈದ್ಯರ ಸಲಹೆಯಂತೆ ಎಂ.ಆರ್.ಐ ಸ್ಕ್ಯಾನ್ ಮಾಡಿಸಿದಾಗ ಬ್ರೈನ್ ಟ್ಯೂಮರ್ ಇದೆ ಎಂಬ ವರದಿ ಬಂದಿದೆ’ ಎಂದು ಅಳಲು ತೋಡಿಕೊಂಡರು.

‘ನಾನು ಆರ್ಥಿಕವಾಗಿ ಹಿಂದುಳಿದಿದ್ದು, ಕುಟುಂಬಕ್ಕೂ ನಾನೇ ಆಸರೆಯಾಗಿದ್ದೇನೆ. ಸಮಾಜ ಸೇವಕನಾಗಿ, ಪರಿಸರ ಸಂರಕ್ಷಕನಾಗಿ ಅಳಿಲು ಸೇವೆ ಮಾಡುತ್ತಿದ್ದ ನನಗೆ ಉತ್ತಮ ಚಿಕಿತ್ಸೆ ಅಗತ್ಯವಾಗಿದೆ. ಸಹಾಯ ಮಾಡಲು ಇಚ್ಛಿಸುವವರು ನನ್ನ ಮೊ.ಸಂ. 99003 71001 ಸಂಪರ್ಕಿಸಬಹುದು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.