ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾರ್ಟಿಯಲ್ಲಿ ಮಾತಿನ‌ ಚಕಮಕಿ: ಗೆಳೆಯನ ಕಾಲಿಗೆ ಗುಂಡೇಟು

Published 25 ಜೂನ್ 2024, 4:47 IST
Last Updated 25 ಜೂನ್ 2024, 4:47 IST
ಅಕ್ಷರ ಗಾತ್ರ

ಕುಶಾಲನಗರ: ಪಾರ್ಟಿಯಲ್ಲಿ ನಡೆದ‌ ಮಾತಿನ ಚಕಮಕಿ ವಿಕೋಪಕ್ಕೆ‌ ತಿರುಗಿ ಉದ್ಯಮಿಗೆ ಗುಂಡು ಹೊಡೆದ ಘಟನೆ ಪಟ್ಟಣದಲ್ಲಿ ನಡೆದಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಕೆ.ಎಸ್. ಶಶಿಕುಮಾರ್ ಅವರಿಗೆ ಅನುದೀಪ್ ಎಂಬಾತ ಗುಂಡು ಹಾರಿಸಿದ್ದು ಕಾರಿನೊಳಗೆ ಕೂತಿದ್ದ ಶಶಿಕುಮಾರ್ ಕಾಲಿಗೆ ಗುಂಡೇಟು ತಗುಲಿದೆ.

ಕೊಪ್ಪ ಗ್ರಾಮದಲ್ಲಿ ಭಾನುವಾರ ನಡೆದ ಜನ್ಮದಿನದ ಪಾರ್ಟಿಯಲ್ಲಿ ಇಬ್ಬರೂ ಪಾಲ್ಗೊಂಡಿದ್ದು, ಚರ್ಚೆ ಸಂದರ್ಭ ಮಾತಿಗೆ ಮಾತು ಬೆಳೆದಿದೆ. ಮಾತಿನ ಚಕಮಕಿ ನಡೆದ‌ ಬಳಿಕ ಅನುದೀಪ್ ಮನೆಗೆ ತೆರಳಿದ್ದಾನೆ. ಆದರೆ ವಾಗ್ವಾದದ ಬಗ್ಗೆ ಮತ್ತೆ ಚರ್ಚಿಸಲು ಅನುದೀಪ್ ಮನೆ‌ ಬಳಿಗೆ ತೆರಳಿದ ಶಶಿಕುಮಾರ್‌ಗೆ ಅನುದೀಪ್ ಏರ್ ಗನ್ ನಿಂದ ಫೈರ್ ಮಾಡಿದ್ದಾನೆ ಎನ್ನಲಾಗಿದೆ.

ಫಾರ್ಚೂನರ್ ಕಾರಿನೊಳಗ ಕುಳಿತಿದ್ದ ಶಶಿಕುಮಾರ್‌ಗೆ ಡೋರ್ ಒಳಗಿಂದ ಹಾದು ಬಂದ ಗುಂಡು ಕಾಲಿಗೆ ಘಾಸಿಗೊಳಿಸಿದೆ.

ಈ ಸಂಬಂಧ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅನುದೀಪ್ ಹಾಗೂ ಪ್ರಚೋದನೆ ನೀಡಿದ ಎನ್ನಲಾದ ಲವಕುಮಾರ್ ಎಂಬವರ ವಿರುದ್ದ ಶಶಿಕುಮಾರ್ ದೂರು ದಾಖಲಾಗಿದೆ.

ಗಾಯಾಳು ಶಶಿಕುಮಾರ್ ಅವರನ್ನು‌ ಹೆಚ್ಚಿನ‌ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ.
ಅನುದೀಪ್ ಹಾಗೂ ಲವಕುಮಾರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT