ಗೋಣಿಕೊಪ್ಪಲು: ಇಲ್ಲಿನ ಕಾವೇರಿ ವಿದ್ಯಾಸಂಸ್ಥೆಯಲ್ಲಿ ನಡೆದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.

ಕಾವೇರಿ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ನಡೆದ ಪುಚ್ಚಿಮಾಡ ತಿಮ್ಮಯ್ಯ, ಪುಚ್ಚಿಮಾಡ ಚೋಂದಮ್ಮ ತಿಮ್ಮಯ್ಯ ಹಾಗೂ ಪುಚ್ಚಿಮಾಡ ಮೀನಾ ಸುಬ್ಬಯ್ಯ ಅವರ ಜ್ಞಾಪಕಾರ್ಥವಾಗಿ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಪಡೆದು ಕೊಂಡಿತು.

ಕನ್ನಡ ವಿಭಾಗದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಕೆ.ಟಿ.ಸೋನಿಕ ಪ್ರಥಮ, ಕುಶಾಲನಗರ ಅನುಗ್ರಹ ಕಾಲೇಜಿನ ಬಿ.ಎಂ. ದರ್ಶನ್ ದ್ವಿತೀಯ, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ವಿದ್ಯಾ ಮಹದೇವ್ ತೃತೀಯ ಸ್ಥಾನ ಗಳಿಸಿದರು. ಇಂಗ್ಲಿಷ್ ವಿಭಾಗದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಕೆ.ಆರ್.ಮನ ಪ್ರಥಮ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಎಸ್.ಅನುಷಾ ದ್ವಿತೀಯ, ನಾಪೋಕ್ಲು ಮರ್ಕಜ್ ಕಾಲೇಜಿನ ಕೆ.ಎಚ್.ಅಫೀದ ತೃತೀಯ ಸ್ಥಾನ ಪಡೆದುಕೊಂಡರು.

ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸುಗುಣ ಮುತ್ತಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎ.ಪೂವಣ್ಣ, ಭಾಷಣ ಸ್ಪರ್ಧೆಯ ಪ್ರಾಯೋಜಕರಾದ ಪಿ.ಟಿ.ಸುಭಾಷ್ ಸುಬ್ಬಯ್ಯ, ಪುಚ್ಚಿಮಾಡ ಅಶೋಕ್ ಅಚ್ಚಪ್ಪ, ಪುಚ್ಚಿಮಾಡ ಲಾಲ ಪೂಣಚ್ಚ, ಪ್ರಾಂಶುಪಾಲ ಎಂ.ಬಿ.ಕಾವೇರಿಯಪ್ಪ, ಕಾವೇರಿ ಕಾಲೇಜು ಅಲುಮಿನೈ ಅಸೋಸಿಯೇಷನ್ ಕಾರ್ಯದರ್ಶಿ ಪಳಂಗಂಡ ವಾಣಿ ಚಂಗಪ್ಪ ಬಹುಮಾನ ವಿತರಿಸಿದರು.

ಕಾವೇರಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕೆ.ಪಿ.ಬೋಪಣ್ಣ, ಪ್ರೊ.ಎಂ.ಎಸ್.ಭಾರತಿ, ಅಲುಮಿನೈ ಅಸೋಸಿಯೇಷನ್ ಕಾರ್ಯಕ್ರಮ ಸಂಯೋಜಕಿ ಕಾವೇರಮ್ಮ, ಸಂಚಾಲಕಿ ಎಸ್.ಎಂ.ರಜನಿ, ನರಸಿಂಹನ್, ಪ್ರೊ.ಎಂ.ಡಿ.ಅಕ್ಕಮ್ಮ, ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಶಿವದಾಸ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.