ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಗಾಳಿ ಸಹಿತ ಬಿರುಸಿನ ಮಳೆ ಸುರಿಯುತ್ತಿದ್ದು, ಹಲವು ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ನಷ್ಟವಾಗಿರುವುದಲ್ಲದೇ ರಾಷ್ಟ್ರೀಯ, ರಾಜ್ಯ ಹೆದ್ದಾರಿ, ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರ ಕಡಿತಗೊಂಡಿದೆ.

ಸಮೀಪದ ಹರದೂರು ಗ್ರಾಮ ಪಂಚಾಯಿತಿ ಕಚೇರಿಯ ಮೇಲೆ ಮರ ಬಿದ್ದು, ಚಾವಣಿ ಹಾಗೂ ಗೋಡೆಗಳಿಗೆ ಹಾನಿಯಾಗಿದಲ್ಲದೇ ಗ್ರಾಮ ಪಂಚಾಯಿತಿ ಹಾಗೂ ಅಂಗನವಾಡಿ ಕೇಂದ್ರಗಳ ಶೌಚಾಲಯಗಳು ಧ್ವಂಸಗೊಂಡಿವೆ.

ಸ್ಥಳಕ್ಕೆ ಗ್ರಾಮ ಫಂಚಾಯಿತಿ ಪಿಡಿಒ ಪೂರ್ಣಿಮಾ, ಅಧ್ಯಕ್ಷರು, ಸದಸ್ಯರು, ಕಂದಾಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಟ್ಟಿಯ ಎನ್.ಆರ್.ನಂಜಪ್ಪ ಅವರ ಮನೆಯ ಮೇಲೆ ಭಾರಿ ಗಾತ್ರದ ಮರ ಬಿದ್ದು, ಚಾವಣಿ ಹಾಗೂ ಗೋಡೆ ಬಿರುಕು ಉಂಟಾಗಿ ಅಂದಾಜು ₹75 ಸಾವಿರದಷ್ಟು ನಷ್ಟವುಂಟಾಗಿದೆ. ಕೆಂಚಟ್ಟಿಯ ಎನ್.ಆರ್. ಗಣಪತಿ ಅವರ ಮನೆಗೆ ತೆರಳುವ ರಸ್ತೆಗೆ ಮರ ಬಿದ್ದು, ಸಂಚಾರಕ್ಕೆ ಅಡ್ಡಿಯಾಯಿತು.

ಸುಂಟಿಕೊಪ್ಪ ಪಿ.ಎಂ.ಲತೀಫ್ ಅವರು ನೆರೆಯ ಸಂತ್ರಸ್ತರಿಗೆ ಉಲುಗುಲಿ ತೋಟದಲ್ಲಿ ಮನೆಯೊಂದರ ಮೇಲೆ ರಾತ್ರಿ ತೋಟದ ಮರ ಬಿದ್ದ ಪರಿಣಾಮ ಮನೆಯ ಚಾವಣಿ ಸೇರಿದಂತೆ ಮನೆಯ ಬಹುಪಾಲು ಹಾನಿಗೀಡಾಗಿದ್ದು ಸಾವಿರಾರು ರೂ ನಷ್ಟವುಂಟಾಗಿದೆ.

ಸಮೀಪದ 7ನೇ ಹೊಸಕೋಟೆಯ ವ್ಯಾಪ್ತಿಯ ತೊಂಡೂರು ಭಾಗದಲ್ಲಿ ಕಮಲ ಗುರುವಪ್ಪ, ದೇವದಾಸ್ ಅವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಇಲ್ಲಿನ ಪಂಚಾಯಿತಿ ಕಸವಿಲೇವಾರಿ ಘಟಕದ ಮೇಲೆಯೂ ಮರ ಬಿದ್ದು ನಷ್ಟ ಸಂಭವಿಸಿದೆ.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ನಿವಾಸಿ ಬಸಪ್ಪ ಅವರ ಮನೆಯು ಭಾರಿ ಗಾಳಿ ಮಳೆಗೆ ಕುಸಿದಿದ್ದು, ನಷ್ಟವಾಗಿದೆ.

ಘಟನಾ ಸ್ಥಳಗಳಿಗೆ ಸುಂಟಿಕೊಪ್ಪ ಕಂದಾಯ ಇಲಾಖೆಯ ಪ್ರಭಾರ ಉಪತಹಶೀಲ್ಧಾರ್ ಪ್ರಶಾಂತ್, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ, ಅಧ್ಯಕ್ಷ ಮಂದೋಡಿ ಜಗನ್ನಾಥ್, ಉಪಾಧ್ಯಕ್ಷ ಸತೀಶ್, ಸುಂಟಿಕೊಪ್ಪ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಉಷಾ, ಹಾಗೂ ಸಹಾಯಕಿ ಗೀತಾ, ಶಿವಪ್ಪ, ಸುಂಟಿಕೊಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ಬಿ.ಎಂ.ಸುರೇಶ್, ಪ್ರಸಾದ್ ಕುಟ್ಟಪ್ಪ,ಆಲಿಕುಟ್ಟಿ, 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಫ್, ಪಿಡಿಒ ನಂದೀಶ್ ಕುಮಾರ್, ಗ್ರಾಮ ಆಡಳಿತಾಧಿಕಾರಿ ನಸೀಮ, ಸಹಾಯಕ ಶಿವಪ್ಪ ಸ್ಥಳ ಪರಿಶೀಲನೆ ನಡೆಸಿದರು.

ಸಮೀಪದ ಮಾದಾಪುರ ಡಿ.ಚೆನ್ನಮ್ಮ ಶಾಲೆ ಮೇಲೆ ಮರ ಬಿದ್ದು ಚಾವಣಿಗೆ ಹಾನಿಯಾಗಿದೆ. ಮಾದಾಪುರ- ಸುಂಟಿಕೊಪ್ಪ ಜಂಕ್ಷನ್ನಲ್ಲಿ ಬೃಹದಾಕಾರದ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಜಂಬೂರು ಟಾಟಾ ತೋಟದ ಕಾರ್ಮಿಕರು ಮರವನ್ನು ಕತ್ತರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಭಾನುವಾರ ಮಧ್ಯಾಹ್ನದ ಬಳಿಕ ಮಳೆಯು ಇಳಿಮುಖಗೊಂಡಿದ್ದರೂ ಗಾಳಿ ಮಾತ್ರ ಹೆಚ್ಚಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.