
ಪ್ರಜಾವಾಣಿ ವಾರ್ತೆ ಸುಂಟಿಕೊಪ್ಪ: ಇಲ್ಲಿನ ಜಿ ಯಂ.ಪಿ ಶಾಲಾ ಮೈದಾನದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ 26 ನೇ ವರ್ಷದ ಡಿ. ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ ಮಂಗಳವಾರ ನಡೆದ ಪಂದ್ಯದಲ್ಲಿ ಅಶೋಕ ಎಫ್.ಸಿ.ಮೈಸೂರು ಮತ್ತು ಸಿಟಿಜನ್ ಎಫ್.ಸಿ ಉಪ್ಪಳ ತಂಡಗಳು ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದೆ. ಮೊದಲ ಪಂದ್ಯವು ಫೈಟರ್ಸ್ ಎಫ್.ಸಿ ಕೂತುಪರಂಬು ಮತ್ತು ಅಶೋಕ ಎಫ್.ಸಿ.ಮೈಸೂರು ತಂಡಗಳ ನಡುವೆ ನಡೆಯುತು. ಬಲಿಷ್ಠ ಆಟಗಾರರನ್ನು ಒಳಗೊಂಡ ಎರಡು ತಂಡಗಳು ತಮ್ಮದೇ ಆದ ಶೈಲಿಯ ಆಟದ ಮೂಲಕ ಮನರಂಜಿಸಿದವು. ಮೈಸೂರು ತಂಡದ ಆಟಗಾರರ ಚಾಕಚಕ್ಯತೆಯ ಪಾಸ್ ಗಳ ಮೂಲಕ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು.ಈ ನಡುವೆ ಅಶೋಕ ತಂಡದ ಆಟಗಾರ ಹೊಡೆದ ಚೆಂಡನ್ನು ಹೊರಹಾಕಲು ಪ್ರಯತ್ನಿಸಿದ ಕೂತುಪರಂಬು ತಂಡದ ಆಟಗಾರ ಶಬೀಬ್ ತಮ್ಮ ತಂಡದ ಗೋಲುಪಟ್ಟಿಯೊಳಗೆ ಹೊಡೆದು ಸ್ವಗೋಲಾಗಿ ಮಾಡಿ ಮೈಸೂರು ತಂಡಕ್ಕೆ ಮುನ್ನಡೆ ತಂದುಕೊಟ್ಟರು.2 ತಂಡಗಳ ನಡುವೆ ಸಮಬಲದ ಪೈಪೋಟಿ ನಡೆಯಿತು 2 ತಂಡಗಳು ಹೊಂದಾಣಿಕೆಯ ಆಟಕ್ಕೆ ಒತ್ತು ನೀಡಿ ಪ್ರೇಕ್ಷಕರನ್ನು ಮನರಂಜಿಸಿತು.ಒಂದು ಹಂತದಲ್ಲಿ ಮೈಸೂರು ತಂಡದ ಆಟಗಾರರನ್ನು ಚೆಂಡನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಕೂತುಪರಂಬು ತಂಡ ಚೆಂಡಿಗಾಗಿ ಪರದಾಡುವಂತೆ ಮಾಡಿದರು. ಇದರೊಂದಿಗೆ ಮೈಸೂರು ತಂಡ ಮೊದಲಾರ್ಧದಲ್ಲಿ 1-0 ಗೋಲುಗಳ ಮುನ್ನಡೆ ಪಡೆದುಕೊಂಡಿತು ದ್ಚಿತೀಯಾರ್ಧದಲ್ಲಿ ಆಕ್ರಮಣ
ಸುಂಟಿಕೊಪ್ಪ ಜಿ.ಯಂ.ಪಿ ಶಾಲಾ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಫೈಟರ್ಸ್ ಎಫ್.ಸಿ.ಕೂತುಪರಂಬು ಮತ್ತು ಅಶೋಕ ಎಫ್‌ಸಿ ಮೈಸೂರು ತಂಡಗಳು ಚೆಂಡಿಗಾಗಿ ಹಣಾಹಣಿ ನಡೆಸಿದವು..
ಸುಂಟಿಕೊಪ್ಪ ಜಿ.ಯಂ.ಪಿ ಶಾಲಾ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಫೈಟರ್ಸ್ ಎಫ್.ಸಿ.ಕೂತುಪರಂಬು ಮತ್ತು ಅಶೋಕ ಎಫ್‌ಸಿ ಮೈಸೂರು ತಂಡಗಳು ಚೆಂಡಿಗಾಗಿ ಹಣಾಹಣಿ ನಡೆಸಿದವು..