ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಳೆದ 10 ವರ್ಷಗಳಿಂದ ತೀರ್ಥ ವಿತರಣೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಅ.17ರಂದು ಬೆಳಿಗ್ಗೆ ತಲಕಾವೇರಿಯಲ್ಲಿ ತೀರ್ಥೋದ್ಭವ ಆಗಲಿದ್ದು, ಅಲ್ಲಿಂದ ತೀರ್ಥ ತರಲಾಗುವುದು. ಬೆಳಿಗ್ಗೆ 9-30ಕ್ಕೆ ಇಲ್ಲಿನ ಕಾವೇರಿ ಪ್ರತಿಮೆ ಹಾಗೂ ತೀರ್ಥಕ್ಕೆ ಹರಪಳ್ಳಿ ರವೀಂದ್ರ ಪೂಜೆ ಸಲ್ಲಿಸುವರು. ನಂತರ ಜೇಸಿ ವೇದಿಕೆಯಲ್ಲಿ ಬೆಳಿಗ್ಗೆ 11ಕ್ಕೆ ಸಾರ್ವಜನಿಕರಿಗೆ ತೀರ್ಥ ಮತ್ತು ಪ್ರಸಾದ ವಿತರಿಸಲಾಗುವುದು ಎಂದು ಹೇಳಿದರು.