ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಶಾಲನಗರ: ತಾಲ್ಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟ

Published 27 ಆಗಸ್ಟ್ 2024, 5:37 IST
Last Updated 27 ಆಗಸ್ಟ್ 2024, 5:37 IST
ಅಕ್ಷರ ಗಾತ್ರ

ಕುಶಾಲನಗರ: ಸೋಮವಾರಪೇಟೆ ತಾಲ್ಲೂಕು ಮಟ್ಟದ ಪದವಿ ಪೂರ್ವ ‌ಕಾಲೇಜುಗಳ ಕಬಡ್ಡಿ ಕ್ರೀಡಾಕೂಟ ಹಾರಂಗಿ ರಸ್ತೆಯಲ್ಲಿರುವ ಮೂಕಾಂಬಿಕ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ನಡೆಯಿತು.

ಮೂಕಾಂಬಿಕಾ ವಿದ್ಯಾವರ್ಧಕ‌ ಟ್ರಸ್ಟ್ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯ ತವರೂರು ‌ಕೊಡಗಿನ ಹಲವು ಪ್ರತಿಭೆಗಳು ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ವಿದ್ಯಾರ್ಥಿಗಳು ಅಂಜಿಕೆ ತೊರೆದು ಕ್ರೀಡಾಕೂಟಗಳಲ್ಲಿ ಹೆಚ್ಚು ಪಾಲ್ಗೊಳ್ಳಬೇಕು. ಸೋಲು ಗೆಲುವುಗಳ ನಿರೀಕ್ಷೆ ಬದಿಗಿಟ್ಟು, ಆಟದಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಬೇಕು’ ಎಂದು ಹೇಳಿದರು.

ಕೊಡಗು ಜಿಲ್ಲಾ ನೆಟ್ ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಎಸ್.ಆದಂ ಮಾತನಾಡಿ, ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ 25 ಬಾಲಕರ ತಂಡ ಹಾಗೂ 16 ಬಾಲಕಿಯರ ತಂಡ ಪಾಲ್ಗೊಂಡಿದ್ದು, ಕ್ರೀಡಾಕೂಟದ ಯಶಸ್ಸಿಗೆ ಮೂಕಾಂಬಿಕಾ ವಿದ್ಯಾಸಂಸ್ಥೆ ನೀಡಿದ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾಸಂಸ್ಥೆ ಪ್ರಾಂಶುಪಾಲ ಗೋಪಾಲ್ ಮಾತನಾಡಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರತಾಪ್, ಉಪನ್ಯಾಸಕ ಕಾಂತರಾಜು, ದಾನಿಗಳಾದ‌ ಬಾಷಾ, ತೀರ್ಪುಗಾರರಾದ ಚೇತನ್, ಕಾರ್ತಿಕ್, ಪ್ರವೀಣ್ ಗೌಡಳ್ಳಿ, ಸಂತೋಷ್, ಸುರೇಶ್, ದೇವಾನಂದ್, ನಿರೂಪಕ ಇಕ್ಬಾಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT