ಶನಿವಾರಸಂತೆ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮನೆಮನೆಗಳಲ್ಲಿ ಮಹಿಳೆಯರು ಶ್ರದ್ದಾಭಕ್ತಿಯಿಂದ ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಆಚರಿಸಿದರು.
ಪಟ್ಟಣ ಮತ್ತು ಹಳ್ಳಿಯ ಮನೆಗಳಲ್ಲಿ ಶುಕ್ರವಾರ ಮುಂಜಾನೆಯಿಂದಲೆ ಮಹಿಳೆಯರು ವರಮಹಾಲಕ್ಷ್ಮೀ ದೇವಿ ಪೂಜೆಗೆ ಸಿದ್ದತೆ ನಡೆಸಿದರು. ಮನೆ ಮುಂಭಾಗದಲ್ಲಿ ರಂಗೋಲಿ ಬಿಡಿಸಿದರು. ಮನೆಯ ದೇವರ ಕೋಣೆಯಲ್ಲಿ ಬಾಳೆ ಗಿಡ, ಕಬ್ಬಿನ ಜಲ್ಲೆಯಿಂದ ಮತ್ತು ಹೂವುಗಳಿಂದ ಮಂಟಪವನ್ನು ಅಲಂಕರಿಸಿ ಅದರಲ್ಲಿ ವರಮಹಾಲಕ್ಷ್ಮೀ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಮಂಟಪದೊಳಗೆ ಕಳಸವನ್ನಿಟ್ಟು ಹಣತೆ ಹಚ್ಚಿ ಹಣ್ಣು, ಕಾಯಿ, ಫಲ ತಾಂಬೂಲ, ದೇವಿಗೆ ಪ್ರೀಯವಾದ ನೈವೇದ್ಯ ಹಾಗೂ ಚಿನ್ನಾಭರಣ, ಹಣ ನಗದು ಸೇರದಂತೆ ಅಮೂಲ್ಯ ವಸ್ತುಗಳನಿಟ್ಟು ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸಿದರು.