ನಾಪೋಕ್ಲು: ಬೋರ್ಗರೆದು ಸುರಿವ ಮಳೆಗೆ ಕೊಡಗಿನ ಬೆಟ್ಟಶ್ರೇಣಿಗಳ ಸೌಂದರ್ಯ ಇಮ್ಮಡಿಗೊಳ್ಳುತ್ತವೆ. ಇದಕ್ಕೆ ಕಾರಣ ಹಸಿರು ಕಾನನದ ನಡುವಿನ ಶ್ವೇತವರ್ಣದ ಜಲಪಾತಗಳು. ಮಳೆಯ ಬಿರುಸಿನ ನಡುವೆ ಬೆಟ್ಟಶ್ರೇಣಿಗಳಲ್ಲಿ ಹರಿದು ಬರುವ ಹಲವು ಜಲಧಾರೆಗಳು ಇದೀಗ ಮನಸೆಳೆಯುತ್ತಿವೆ.

ಶ್ವೇತ ವೈಭವದಿಂದ ಕಂಗೊಳಿಸುವ ಜಲಪಾತಗಳು, ಮೈದುಂಬಿ ಹರಿಯುತ್ತಿರುವ ಝರಿ ತೊರೆಗಳು ವೀಕ್ಷಕರಿಗೆ ಮುದ ನೀಡುತ್ತಿವೆ. ಸಮೀಪದ ಕಕ್ಕಬ್ಬೆಯ ಮೇದುರ ಜಲಪಾತ, ಚೆಯ್ಯಂಡಾಣೆ ಬಳಿಯ ಚೇಲಾವರ ಜಲಪಾತ, ನೆಲಜಿ ಗ್ರಾಮದ ಪಾರೆಕಟ್ಟು ಜಲಪಾತ, ಪೇರೂರು ಗ್ರಾಮದ ದೇವರಗುಂಡಿ ಜಲಪಾತ, ತಡಿಯಂಡಮೋಳ್ ಬೆಟ್ಟ ಶ್ರೇಣಿಯ ನೀಲಕಂಡಿಜಲಪಾತ, ಯವಕಪಾಡಿ ಗ್ರಾಮದ ಚಿಂಗಾರ ಜಲಪಾತಗಳು, ಕರಿಕೆಯ ಜಲಪಾತಗಳು ವೀಕ್ಷಣೆಗೆ ಪ್ರಮುಖವಾಗಿರುವ ಜಲಪಾತಗಳು.

ಇವುಗಳಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಹತ್ತು ಹಲವು ಅನಾಮಧೇಯ ಜಲಪಾತಗಳು ಇದೀಗ ಮೈದುಂಬಿ ಧುಮುಕುತ್ತಿವೆ. ಬೆಟ್ಟಶ್ರೇಣಿಗಳಲ್ಲಿ, ಗುಡ್ಡಗಳಲ್ಲಿ, ಇಳಿಜಾರು ಸ್ಥಳಗಳಲ್ಲಿ ಹರಿದು ತೋಡು, ನದಿಗಳನ್ನು ಸೇರುತ್ತಿವೆ.

ಭೋರ್ಗರೆವ ಮಳೆಗೆ ಮೈದುಂಬಿ ಜಲಧಾರೆಯಾಗಿ ಭೋರ್ಗರೆಯುವ ಚೇಲಾವರ ಜಲಪಾತ ಕೊಡಗಿನ ಪ್ರವಾಸಿ ನಕ್ಷೆಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಮಳೆಗಾಲದ ದಿನಗಳಲ್ಲಿ ಈ ಜಲಪಾತದ ಚೆಲುವು ಮನಮೋಹಕ. ಕೊಡಗು ಜಿಲ್ಲೆಯ ನರಿಯಂದಡ ಗ್ರಾಮಪಂಚಾಯತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿರುವ ಎರಡು ರಮಣೀಯ ಜಲಪಾತಗಳು ತಮ್ಮ ಚೆಲುವಿನಿಂದ ಪ್ರವಾಸಿಗರ ಮನಸೆಳೆದಿವೆ.

ಕೊಡಗಿನಲ್ಲಿ ಅತೀ ಎತ್ತರವಾದ ತಡಿಯಂಡಮೋಳ್ ಶಿಖರ, ಬ್ರಹ್ಮಗಿರಿ ಬೆಟ್ಟಸಾಲುಗಳು ಮುಗಿಲನ್ನು ಚುಂಬಿಸುತ್ತಾ ನಿಂತಿವೆ. ಈ ಬೆಟ್ಟಸಾಲುಗಳ ಕಣಿವೆಗಳಿಂದ ಹಲವು ನದಿಗಳು ಉಗಮಿಸಿ ಹರಿದು ಬರುತ್ತವೆ. ಬ್ರಹ್ಮಗಿರಿ ಬೆಟ್ಟದ ಬುಡದಿಂದ ಕಾವೇರಿ ನದಿ ಉಗಮಿಸಿದರೆ ತಡಿಯಂಡಮೋಳ್ ಶಿಖರದ ಸರಹದ್ದಿನಲ್ಲಿರುವ ಇಗ್ಗುತಪ್ಪ ಬೆಟ್ಟದಿಂದ ಬಲಿಯಟ್ರ ನದಿ ಮತ್ತು ಚೋಮಕುಂದು ಬೆಟ್ಟದಿಂದ ಸೋಮನನದಿಗಳು ಹರಿದುಬರುತ್ತವೆ. ಈ ಎರಡು ನದಿಗಳು ವಿರಾಜಪೇಟೆ ತಾಲ್ಲೂಕಿನ ಚೆಯ್ಯಂಡಾಣೆ ಬಳಿಯ ಚೇಲಾವರ ಗ್ರಾಮದಲ್ಲಿ ಜಲಪಾತಗಳಾಗಿ ಧುಮುಕುತ್ತವೆ. ಹಾಗೆಯೇ, ಹರಿದು ಅನತಿ ದೂರದಲ್ಲಿ ಸಂಗಮವಾಗಿ ಬಲಮುರಿ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತವೆ.

ಬಂಡೆಗಲ್ಲುಗಳ ಮೇಲಿನಿಂದ ಧುಮುಕುವ ಚೇಲಾವರದ ಪ್ರಮುಖ ಜಲಪಾತ ಏಮೆಪಾರೆ ಜಲಪಾತ. ಹಸಿರು ವನರಾಶಿಯ ನಡುವೆ ಹಾಲ್ನೊರೆಯಂತೆ ಧರೆಗಿಳಿಯುವ ಈ ಜಲಪಾತ ನಯನ ಮನೋಹರ. ಮಳೆಗಾಲದಲ್ಲಿ ತಮ್ಮ ವೈಭವವನ್ನು ಮೆರೆಯುವ ಜಲಪಾತಗಳಲ್ಲಿ ಚೇಲಾವರ ಜಲಪಾತಗಳಿಗೆ ವಿಶೇಷ ಆಕರ್ಷಣೆ. ದಕ್ಷಿಣ ಕೊಡಗಿನ ವಿರಾಜಪೇಟೆಯಿಂದ ಸುಮಾರು 26 ಕಿ.ಮೀ. ದೂರದಲ್ಲಿರುವ ಪುಟ್ಟ ಊರು ಚೆಯ್ಯಂಡಾಣೆ ಬಳಿಯ ಚೇಲಾವರ ಗ್ರಾಮದಲ್ಲಿ ನಿಸರ್ಗದ ನಡುವಿನ ಅಪೂರ್ವ ಜಲಧಾರೆಗಳ ಸೊಬಗು ಸವಿಯಬಹುದು. ಸಮೀಪದಲ್ಲಿಯೇ ಬಲಿಯಟ್ರ ಜಲಪಾತವಿದೆ.

ಕಕ್ಕಬ್ಬೆ ಬಳಿಯ ಮೇದುರ ಜಲಪಾತ ಮತ್ತೊಂದು ಮನಮೋಹಕ ಜಲಧಾರೆ. ನಿತ್ಯ ಹರಿದ್ವರ್ಣದ ದಟ್ಟ ಕಾಡಿನಲ್ಲಿ ಹೆಜ್ಜೆ ಹಾಕತೊಡಗಿದರೆ ಕಪ್ಪು ಬಂಡೆಯ ಮೇಲಿಂದ ಭೋರ್ಗರೆಯುತ್ತಾ ಧುಮುಕುವ ರಮಣೀಯವಾದ ಜಲಪಾತದ ದರ್ಶನವಾಗುತ್ತದೆ. ನೆಲಜಿ ಗ್ರಾಮದ ಪಾರೆಕಟ್ಟು ಜಲಪಾತ ಈಗ ವೀಕ್ಷಣೆಗೆ ಮನಮೋಹಕ. ಇನ್ನು ಪೇರೂರು ಗ್ರಾಮ ಬೆಟ್ಟಗಳಲ್ಲಿ ಸಾಲು ಸಾಲು ಜಲಧಾರೆಗಳು ಕಾಣಸಿಗುತ್ತವೆ. ಬೆಟ್ಟಗಳಿಂದ ಹರಿದು ಬರುವ ಜಲಧಾರೆ ಅಲ್ಲಲ್ಲಿ ಬಂಡೆಗಳ ಮೇಲೆ ಬೆಳ್ನೊರೆಯಾಗಿ ಧುಮುಕುವ ದೃಶ್ಯ ಕಣ್ಮನ ಸೆಳೆಯುತ್ತದೆ. ಧಾರಾಕಾರ ಮಳೆ ಸುರಿದು ಬಿಡುವು ಕೊಟ್ಟ ದಿನಗಳು ಜಲಪಾತಗಳ, ಝರಿ, ತೊರೆಗಳ ವೀಕ್ಷಣೆಗೆ ಸಕಾಲ. ತಡಿಯಂಡಮೋಳ್ ಶಿಖರಕ ಕಣಿವೆಗಳೆಡೆಯಿಂದ ಹರಿದು ಪ್ರಪಾತದತ್ತ ಧುಮುಕುವ ನೀಲಕಂಡಿ ಜಲಪಾತದ ಸೊಬಗೂ ಚೇತೋಹಾರಿ.

ಈ ಜಲಧಾರೆಗಳಿಗಿಂತ ಭಿನ್ನವಾಗಿ ಮಡಿಕೇರಿ-ಸಂಪಾಜೆ ಹಾದಿಯ ಎರಡನೇ ಮೊಣ್ಣಂಗೇರಿಯಲ್ಲಿ ಹರಿದು ಬರುವ ಜಲಧಾರೆ ಕಣ್ಮನ ತಣಿಸುತ್ತದೆ. ಧಾರಾಕಾರ ಮಳೆಗೆ ಬೆಟ್ಟಶ್ರೇಣಿಗಳಿಂದ ಹರಿದು ಬರುವ ಜಲಧಾರೆ ಪ್ರಯಾಣಿಗರ ಕಣ್ಮನ ಸೆಳೆಯುತ್ತವೆ. ಭಾಗಮಂಡಲ-ಕರಿಕೆ ಹಾದಿಯಲ್ಲಿ ಕಾಣಸಿಗುವ ಕರಿಕೆಯ ಕನ್ನಿಕೆಯರೂ ಈಗ ಶ್ವೇತಧಾರೆಗಳಾಗಿ ಧುಮುಕುತ್ತಿವೆ. ಕೇರಳದತ್ತ ಸಾಗುವವರಿಗೆ ಸುಂದರ ಜಲಪಾತಗಳ ಹಲವು ನೋಟಗಳು ಲಭ್ಯ. ಕೆಲವು ರಸ್ತೆಯಂಚಿಗೆ ಧುಮುಕಿದರೆ ಮತ್ತೆ ಹಲವು ತಲಕಾವೇರಿ ರಕ್ಷಿತಾರಣ್ಯದಲ್ಲಿ ಬಂಡೆಗಲ್ಲುಗಳ ಮೇಲೆ ಬೋರ್ಗರೆದು ಧುಮ್ಮಿಕ್ಕುತ್ತವೆ.

ರಸ್ತೆಯಂಚಿನ ಕೆಲವು ಜಲಪಾತಗಳಲ್ಲದೇ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಬೆಟ್ಟಶ್ರೇಣಿಗಳಿಂದ ಧುಮುಕುವ ಹತ್ತು ಹಲವು ಜಲಧಾರೆಗಳು ಮನಮೋಹಕವಾಗಿ ಕಂಗೊಳಿಸಿ ಭೂದೇವಿಯ ಶೃಂಗಾರಕ್ಕೆ ಕಾರಣವಾಗುತ್ತವೆ.

ಕಕ್ಕಬ್ಬೆ ಬೆಟ್ಟಶ್ರೇಣಿಗಳಲ್ಲಿ ಭೋರ್ಗರೆಯುತ್ತಿದೆ ಜಲಪಾತ ಬ್ರಹ್ಮಗಿರಿ ಶ್ರೇಣಿಯಲ್ಲಿವೆ ಲೆಕ್ಕವಿಲ್ಲದಷ್ಟು ಜಲಧಾರೆಗಳು ನೋಡಿದರೆ ನೋಡುತ್ತಲೇ ಇರುವಂತಹ ಚೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.