ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ಮನರಂಜಿಸಿದ ಮಹಿಳಾ ಹಾಕಿ ಪಂದ್ಯಾಟ

Published 8 ಜನವರಿ 2024, 7:04 IST
Last Updated 8 ಜನವರಿ 2024, 7:04 IST
ಅಕ್ಷರ ಗಾತ್ರ

ಸೋಮವಾರಪೇಟೆ:  ನಾಲ್ಕು ದಿನಗಳಿಂದ ಇಲ್ಲಿನ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ನಡೆದ ರಾಷ್ಟ್ರ ಮಟ್ಟದ 17 ವರ್ಷದೊಳಗಿನ ಮಹಿಳಾ ಹಾಕಿ ಪಂದ್ಯಾಟ ಕೆಲವು ರೋಚಕ ಕ್ಷಣಗಳೊಂದಿಗೆ ಭಾನುವಾರ ಸೆಮಿಫೈನಲ್ ಪಂದ್ಯಗಳೊಂದಿಗೆ ಅಂತ್ಯಗೊಂಡಿತು. ಮುಂದಿನ ಪಂದ್ಯಾಟಗಳು ಪೊನ್ನಂಪೇಟೆ ಟರ್ಫ್‌ ಮೈದಾನದಲ್ಲಿ ನಡೆಯಲಿವೆ.

ಮಿಂಚಿದ ತಮ್ಮನ್ನಾ: 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಚಂಡೀಗಡದ ತಂಡಕ್ಕೆ ಸಿಕ್ಕಿದ ನಾಲ್ಕು ಫೀಲ್ಡ್ ಗೋಲುಗಳನ್ನು ಮುನ್ನಡೆ ಆಟಗಾರ್ತಿ ತಮನ್ನಾ ಹೊಡೆದರು. 17, 27, 40, 65 ನೇ ನಿಮಿಷಗಳಲ್ಲಿ ಸತತ ಗೋಲು ಗಳಿಸುವುದರೊಂದಿಗೆ ಪ್ರೇಕ್ಷಕರಿಂದಲೂ ಬಹುಮಾನಗಳನ್ನು ಪಡೆದರು.

ಫೈನಲ್ ತಲುಪಿಸ ಚಂಡೀಗಡ ತಂಡ.
ಫೈನಲ್ ತಲುಪಿಸ ಚಂಡೀಗಡ ತಂಡ.

ಊಟ, ವಸತಿ ವ್ಯವಸ್ಥೆ: ತೋಳೂರುಶೆಟ್ಟಳ್ಳಿಯ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಹಾಕಿ ತಂಡಗಳಿಗೆ ಊಟ ಮತ್ತು ವಸತಿ ಕಲ್ಪಿಸಲಾಗಿತ್ತು. ಮೈದಾನದಿಂದ ಶಾಲಾ ವ್ಯಾನ್‌ಗಳ ಕಳುಹಿಸಿಕೊಡಲಾಗಿತ್ತು. ಒಂದೊಂದು ತಂಡದ ಜವಾಬ್ದಾರಿಯನ್ನು ಇಬ್ಬರು ಶಿಕ್ಷಕಿಯರು ವಹಿಸಿದ್ದರು. ಸ್ಕೌಟ್ ಮತ್ತು ಗೈಡ್ಸ್, ಸೇವಾದಳ ಹಾಗು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಸ್ವಯಂ ಸೇವಕರಾಗಿದ್ದರು.

ಶಾಸಕ ಮಂತರ್ ಗೌಡ ಆಟಗಾರರಿಗೆ ಶುಭಕೋರಿದರು.
ಶಾಸಕ ಮಂತರ್ ಗೌಡ ಆಟಗಾರರಿಗೆ ಶುಭಕೋರಿದರು.

ತೀರ್ಪುಗಾರರು: ಡ್ಯಾನಿ ಈರಪ್ಪ, ನಾಣಯ್ಯ, ಡ್ಯಾನಿ ದೇವಯ್ಯ, ಸಿ.ಎನ್.ಆದರ್ಶ್, ಎಂ.ಎ.ಅಯ್ಯಪ್ಪ, ಕೆ.ಸಿ.ಬೋಪಣ್ಣ, ಕೆ.ಕೆ.ಬೋಪಣ್ಣ, ಅರುಣ್, ಶಿವಣ್ಣ, ಎಚ್.ಎನ್.ರತೀಶ್ , ಕ್ರೀಡಾಕೂಟದ ಉಸ್ತುವಾರಿಗಳಾಗಿ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಡಾ.ಸದಾಶಿವ ಪಲ್ಲೇದ್, ತಾಂತ್ರಿಕಾ ವಿಭಾಗದಲ್ಲಿ ಪಿ.ಈ.ನಂದ, ಗಣೇಶ್ ಕುಮಾರ್, ಸುರೇಶ್ ಕುಮಾರ್, ದರ್ಶನ್ ಸೋಮಣ್ಣ, ಎಲ್.ಪಿ.ಪಾಲಾಕ್ಷ, ಅಮೃತ್, ಮೋಹನ್, ಕೆ.ಎನ್.ರಮೇಶ್, ಸಂತೋಷ್, ಆಶೋಕ್, ಶಿವಪ್ರಸಾಧ್, ಸಂದೇಶ್, ಮಂಜು, ಬೋಪಣ್ಣ, ಲಿನ್ನಿ, ಕವಿತ, ವೀಕ್ಷಕ ವಿವರಣೆಕಾರರಾಗಿ ಅಪಾಡಂಡ ಮೌನ ದರ್ಶನ್, ಮೇಘನಾ, ಅಂತೋಣಿ, ವರದರಾಜು, ಬಿ.ಟಿ.ಪೂರ್ಣೇಶ್ ಕಾರ್ಯನಿರ್ವಹಿಸಿದರು.

ನಾಲ್ಕು ಗೋಲು ಗಳಿಸಿದ ಚಂಡೀಗಡದ ತಂಡದ ತಮನ್ನಾ
ನಾಲ್ಕು ಗೋಲು ಗಳಿಸಿದ ಚಂಡೀಗಡದ ತಂಡದ ತಮನ್ನಾ

 ಕೇಂದ್ರದ ವೀಕ್ಷಕರ ಮೆಚ್ಚುಗೆ: ಜಿಲ್ಲೆಯಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಹಾಕಿ ಪಂದ್ಯಾಟ ಮತ್ತು ವ್ಯವಸ್ಥೆಯ ಬಗ್ಗೆ ದೆಹಲಿಯ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದ ವೀಕ್ಷರಾಗಿ ಬಂದಿದ್ದ ರಾಜ್ ಶರ್ಮ, ಕೃಷ್ಣಪ್ಪ, ವಿಜಯಲಕ್ಷ್ಮೀ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು. ತಂಡಗಳ ಸದಸ್ಯರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಕ್ರೀಡಾಕೂಟಕ್ಕೆ ಕೊಡಗು ಜಿಲ್ಲಾಡಳಿತ, ಮತ್ತು ದೈಹಿಕ ಶಿಕ್ಷಣ ಸಂಸ್ಥೆಯ ಶಿಕ್ಷಕರ ಪ್ರಯತ್ನ ಶ್ಲಾಘನೀಯ.

-ದೆಹಲಿಯ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ವತಿಯಿಂದ ವೀಕ್ಷರಾಗಿ ಆಗಮಿಸಿದ್ದ ರಾಜ್ ಶರ್ಮ
-ದೆಹಲಿಯ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ವತಿಯಿಂದ ವೀಕ್ಷರಾಗಿ ಆಗಮಿಸಿದ್ದ ರಾಜ್ ಶರ್ಮ

ಮರುಕಳಿಸಿದ ಹಳೆ ನೆನಪು

ಹಾಕಿ ಪಂದ್ಯಾಟ ಕೀಡಾಪ್ರೇಮಿಗಳಿಗೆ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತು. ಇದೇ ಮೈದಾನದಲ್ಲಿ ಆಟವಾಡಿದ ಒಲಂಪಿಯನ್‌ಗಳಾದ ಬಿ.ಪಿ.ಗೊವೀಂದ ಅರ್ಜುನ್ ಹಾಲಪ್ಪ ಎಸ್.ವಿ.ಸುನಿಲ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಕೀರ್ತಿಯನ್ನು ಪಸರಿಸಲು ಕಾರಣರಾಗಿದ್ದಾರೆ. ಮೊದಲ ಸೆಮಿಫೈನಲ್ ಪಂದ್ಯಕ್ಕೆ ಶಾಸಕ ಮಂತರ್ ಗೌಡ ಚಾಲನೆ ನೀಡಿದರು. ‘ನೂತನ ಟರ್ಫ್ ಮೈದಾನದಲ್ಲಿ ಅಂತರರಾಷ್ಟ್ರೀಯ ಪಂದ್ಯ ನಡೆಯುತ್ತಿರುವುದು ಸಂತಸ ಜಿಲ್ಲೆಗೆ ಹೆಮ್ಮೆಯ ವಿಚಾರ.  ಹಾಕಿಯ ತವರಾದ ಕೊಡಗಿನಲ್ಲಿ ಇಂತಹ ಕ್ರೀಡಾಕೂಟ ನಡೆಯುತ್ತಿರುವುದರಿಂದ ಜಿಲ್ಲೆಯ ಗ್ರಾಮೀಣ ಪ್ರತಿಭೆಗಳಿಗೂ ಅವಕಾಶ ಸಿಗಲಿದೆ ಎಂದರು. ನವೀಕರಿಸಿದ ಟರ್ಫ್ ಮೈದಾನ ಉದ್ಘಾಟನೆಗೊಂಡು ಮಾರನೇ ದಿನವೇ ಜ.4ರಂದು ರಾಷ್ಟಮಟ್ಟದ ಪಂದ್ಯಾಟಗಳು ನಡೆದಿರುವುದು ಹಾಕಿ ಪ್ರೇಮಿಗಳು ಸಂಭ್ರಮ ಪಡುವಂತಾಯಿತು. ಸ್ಟೇಡಿಯಂ ಮತ್ತು ಹೊರ ಭಾಗದಲ್ಲಿ ಕ್ರೀಡಾಪ್ರೇಮಿಗಳು ಕಿಕ್ಕಿರಿದು ತುಂಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT