ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಮಧ್ಯರಂಗನಾಥನಿಗೆ 150 ಕೆ.ಜಿ ಬೆಣ್ಣೆ ಅಲಂಕಾರ

ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ ಹ್ಯಾಂಡ್‌ಪೋಸ್ಟ್ ಸಮೀಪ ಇರುವ ದೇವಾಲಯ
Last Updated 6 ಜನವರಿ 2020, 4:06 IST
ಅಕ್ಷರ ಗಾತ್ರ
ADVERTISEMENT
""

ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಗ್ರಾಮದ ಹ್ಯಾಂಡ್ ಪೋಸ್ಟ್ ಸಮೀಪದ ಮಧ್ಯರಂಗನಾಥ ದೇವಾಲಯವು ವೈಕುಂಠ ಏಕಾದಶಿಗೆ ಸಜ್ಜುಗೊಂಡಿದೆ.

ವರ್ಷಕ್ಕೊಮ್ಮೆ ವೈಕುಂಠ ಏಕದಾಶಿ ದಿನದಂದು ಮಾತ್ರ ದೇವಾಲಯದ ಉತ್ತರದ ಬಾಗಿಲನ್ನು ತೆರೆಯಲಾಗುತ್ತದೆ. ಅಂದು ಮಧ್ಯರಂಗನಾಥ ದೇವರಿಗೆ 150 ಕೆ.ಜಿ ಬೆಣ್ಣೆ ಅಲಂಕಾರದಿಂದ ಶೃಂಗಾರ ಮಾಡಲಾಗುತ್ತದೆ. ಅಂದಿನ ದಿನದಲ್ಲಿ ಲಕ್ಷಾಂತರ ಜನರು ಬಂದು ಹೋಗುತ್ತಾರೆ.

ಧಾರ್ಮಿಕ ಭಾವೈಕ್ಯಕ್ಕೆ ಹೆಸರುವಾಸಿ ಯಾದ, ಜಲಪಾತ ಗಳನ್ನು ಹೊಂದಿರುವ ತಾಣವಾದ ಶಿವನಸಮುದ್ರದಲ್ಲಿ ಮಧ್ಯರಂಗನಾಥ ದೇವಾಲಯವನ್ನು ತಮಿಳುನಾಡಿನ ದೇವಾಲಯಗಳ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈಗ ಮುಜಾರಾಯಿ ಇಲಾಖೆಗೆ ಸೇರಿದೆ. ಈ ದೇವಾಲಯದಲ್ಲಿ ನಿತ್ಯ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ದೇವಾಲಯ ತೆಗೆದಿರುತ್ತದೆ ಹಾಗೂ ಮಧ್ಯಾಹ್ನಾ ದಾಸೋಹದ ವ್ಯವಸ್ಥೆಯೂ ಸಹ ಪ್ರತಿನಿತ್ಯ ಇರುತ್ತದೆ. ಹಬ್ಬಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ ಅಂದು ಮಾತ್ರ ಮಧ್ಯರಾತ್ರಿಯವರೆಗೂ ದೇವಾಲಯ ಪ್ರವೇಶವಿರುತ್ತದೆ.

ಮಧ್ಯರಂಗನಾಥ ಸ್ವಾಮಿ

ಇತಿಹಾಸ: ಗಂಗರು ಮತ್ತು ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು ಇದಕ್ಕೆ 400 ವರ್ಷಗಳ ಇತಿಹಾಸವಿದೆ. ಇದು ಸುಮಾರು 250 ವರ್ಷಗಳ ಹಿಂದೆ ದ್ವೀಪಗ್ರಾಮವಾಗಿತ್ತು. ಆ ನಂತರ ಚೋಳರು ಐತಿಹಾಸಿ ವೆಸ್ಲಿ ಸೇತುವೆಯನ್ನು ನಿರ್ಮಾಣ ಮಾಡಿದ್ದರು. ಈ ಗ್ರಾಮದಲ್ಲಿ ಸುಮಾರು 1700 ಜನರು ವಾಸ ಮಾಡುತ್ತಿದ್ದಾರೆ. ಮಧ್ಯರಂಗನಾಥ ದೇವಾಲಯ ಈ ಹಿಂದೆ ಶೈವ ಮತ್ತು ನಾಥ ಪಂಥಕ್ಕೆ ಸೇರಿತ್ತು. ಹೊಯ್ಸಳದ ರಾಜ ವಿಷ್ಣುರ್ಧನನ ಆಳ್ವಿಕೆ ಕಾಲದಲ್ಲಿ ತಮಿಳುನಾಡಿನಿಂದ ರಾಮಾನುಜಾಚಾರ್ಯರು ಬಂದು ಮಧ್ಯರಂಗನಾಥ ದೇವಾಲಯವನ್ನು ವೈಷ್ಣವ ದೇವಾಲಯವನ್ನಾಗಿ ಪರಿರ್ವತಿಸಿದ್ದರು.

ಶ್ರೀರಂಗಪಟ್ಟಣದಲ್ಲಿ ಇರುವ ಆದಿರಂಗ ದೇವಾಸ್ಥಾನ, ಶಿವನ ಸಮುದ್ರದ ಮಧ್ಯರಂದ ದೇವಾಸ್ಥಾನ ಹಾಗೂ ತಮಿಳುನಾಡಿನ ಶ್ರೀರಂಗದಲ್ಲಿರುವ ಅಂತ್ಯರಂಗ ದೇವಾಸ್ಥಾನವನ್ನು ವೈಕುಂಠ ಏಕದಾಶಿ ದಿನದಂದು ಸೂರ್ಯ ಉದಯಿಸುವುದರಿಂದ ಸೂರ್ಯ ಮುಳುಗಡೆಯಾಗುವುದರ ಒಳಗೆ ನೋಡಿದರೆ ಶುಭವಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಮೂರು ದೇವಾಲಯಗಳ ಸುತ್ತ ಕಾವೇರಿ ನದಿ ಹರಿಯುತ್ತದೆ. ಈ ಮೂರು ದೇವಾಲಯಗಳನ್ನು ನೋಡಿರುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಆದರೆ, ಪ್ರತಿವರ್ಷವೂ ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡ ಬಂದು ಹೋಗುತ್ತಾರೆ ಎಂದು ದೇವಾಲಯದ ಅರ್ಚಕ ಮಾಧವನ್ ಭಟ್ಟಾಚಾರ್ ಪ್ರಜಾವಾಣಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT