ಕೋಲಾರ: ಆಟೊ, ಕಬ್ಬಿಣದ ವಾಲ್ವ್, ಚಿನ್ನದ ತಾಳಿಯ ಕಳ್ಳತನದಲ್ಲಿ ತೊಡಗಿದ್ದ ಆರೋಪದ ಮೇಲೆ ನಾಲ್ವರನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಜಿಎಫ್ ತಾಲ್ಲೂಕಿನ ಪಾರಾಂಡಹಳ್ಳಿಯ ನಾಗರಾಜ್ (50), ಕೋಲಾರದ ಟಮಕದ ಶಿವ (37), ತಾಲ್ಲೂಕಿನ ಶಿಳ್ಳಂಗೆರೆಯ ಜ್ಞಾನದೇವ (36) ಹಾಗೂ ಕೆಜಿಎಫ್ ತಾಲ್ಲೂಕಿನ ಬೇತಮಂಗಲದ ವರುಣ್ (22) ಬಂಧಿತರು.

ವಿವಿಧ ದೇಗುಲಗಳಲ್ಲಿ ಕಳ್ಳತನ ಮಾಡಿದ ಆರೋಪ ನಾಗರಾಜ್ ಮೇಲಿದೆ. ಆತನಿಂದ ₹ 1.27 ಲಕ್ಷ ಮೌಲ್ಯದ ಬಂಗಾರದ ತಾಳಿ, ₹ 2.85 ಲಕ್ಷದ ಆಟೊಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಮೂವರ ಮೇಲೆ ಕೋಲಾರ ಹೊರವಲಯದ ಗಾಜಲದಿನ್ನೆಯಲ್ಲಿ ಯರಗೋಳ್ ಯೋಜನೆಗೆ ಸಂಬಂಧಿಸಿದ ಕಬ್ಬಿಣದ ವಾಲ್ವ್ಗಳನ್ನು (ಸುಮಾರು ₹ 25 ಲಕ್ಷ ಮೌಲ್ಯ) ಕಳ್ಳತನ ಮಾಡಿದ ಆರೋಪವಿದೆ. ಸಿಬ್ಬಂದಿಯನ್ನು ಎಸ್ಪಿ ನಿಖಿಲ್ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.