ಚೈತನ್ಯ ಮಹಾರಾಜರ ಆರಾಧನೆ ಆರಂಭ
ಮುಳಬಾಗಿಲು: ನಗರದ ಬ್ರಹ್ಮಚೈತನ್ಯ ಮಂದಿರದಲ್ಲಿ ಬ್ರಹ್ಮ ಚೈತನ್ಯ ಟ್ರಸ್ಟ್ ಆಶ್ರಯದಲ್ಲಿ ಸದ್ಗುರು ಬ್ರಹ್ಮ ಚೈತನ್ಯ ಮಹಾರಾಜರ ಆರಾಧನೆ ಗುರುವಾರ ಪ್ರಾರಂಭವಾಯಿತು.
ಕಾಕಡಾರತಿ, ರಾಮನಾಮ ಸ್ಮರಣೆ, ಕಳಶ ಸ್ಥಾಪನೆ, ಶ್ರೀರಾಮದೇವರಿಗೆ ಅಭಿಷೇಕ ಮತ್ತು ಪೂಜೆ, ಶ್ರೀರಾಮ ಭಜನೆ ಮಂಡಳಿಯಿಂದ ಭಜನೆ ಹಾಗೂ ಹೆಣ್ಣುಮಕ್ಕಳಿಂದ ಭಜನೆ ಕಾರ್ಯಕ್ರಮ ನಡೆಯಿತು.
ಡಿ. 8ರಂದು ಕಾಕಡಾರತಿ, ರಾಮನಾಮ ಸ್ಮರಣೆ, ಕಳಶ ಸ್ಥಾಪನೆ, ಶ್ರೀರಾಮದೇವರಿಗೆ ಅಭಿಷೇಕ ಪೂಜೆ ಕಾರ್ಯಕ್ರಮ ನಡೆಯಲಿದೆ.
ಶುಕ್ಲ ಯಜುರ್ವೇದ ಸಂಘದ ಅಧ್ಯಕ್ಷ ಎಂ.ಕೆ. ವಾಸುದೇವ್ ಅಧ್ಯಕ್ಷತೆವಹಿಸುವರು. ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮವಿದೆ. ಸಾಧಕರಿಗೆ ಸನ್ಮಾನ ಏರ್ಪಡಿಸಲಾಗಿದೆ. ಹರಿಕಥೆ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಅಲಂಗೂರು ಗುರುಶಂಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.