ಬೇತಮಂಗಲ: ಬೇತಮಂಗಲ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಪತ್ರ ಮೂಲಕ ಪ್ರಸ್ತಾವನೆ ಸಲ್ಲಿಸಲು ಬುಧವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನು ಕಾರ್ತಿಕ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ಹಮ್ಮಿಕೊಳ್ಳಲಾಯಿತು. ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು 10 ಸಾವಿರದಿಂದ 20 ಸಾವಿರದಷ್ಟಿರಬೇಕು. ಎಂಟು ವಾರ್ಡ್ಗಳ ಪೈಕಿ 27 ಸದಸ್ಯರನ್ನು ಒಳಗೊಂಡಿದ್ದು, 15 ಸಾವಿರ ಜನಸಂಖ್ಯೆ ಇದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ ಬಳಿಕ ಕೆಜಿಎಫ್ ಮುಖ್ಯ ರಸ್ತೆಯಲ್ಲಿರುವ ಕಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಶೆಟ್ಟಿಹಳ್ಳಿ, ಬ್ಯಾಟರಾಯನಳ್ಳಿ ಮತ್ತು ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತೂರು ಗ್ರಾಮವನ್ನು ಬೇತಮಂಗಲಕ್ಕೆ ಸೇರಿಸಿಕೊಂಡು, ಜನಸಂಖ್ಯೆ 20 ಸಾವಿರ ಮೀರದಂತೆ ಕ್ರಮ ವಹಿಸಿ, ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಸಿ. ವಿನು ಕಾರ್ತಿಕ್, ಉಪಾಧ್ಯಕ್ಷ ಅಲವೇಲಮ್ಮ, ಪಿಡಿಒ ವಸಂತ್ ಕುಮಾರ್, ಸದಸ್ಯ ಇನಾಯತ್ ವುಲ್ಲಾ, ಡೈರಿ ಮಂಜುನಾಥ್, ಆನಂದ್, ರಾಧಮ್ಮ, ಶೇಷಾದ್ರಿ, ಶ್ರೀನಿವಾಸ್, ಕುಸುಮ, ಸ್ವಪ್ನ, ಸಂಧ್ಯಾ, ಶಿಲ್ಪ, ಪ್ರಿಯದರ್ಶಿನಿ, ಓಂ ಸುರೇಶ್, ಜಯಮ್ಮ, ಏಜಾಜ್ ಪಾಷಾ, ಅರ್ಬಿನ್ ತಾಜ್, ರೇಣುಕಾ, ಮಮತಾ, ಗಣೇಶ್ , ಜೈಲಕ್ಷ್ಮಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಕರ ವಸಲಿಗರ ರಾಮು, ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.