ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಂಚಕ್ಕೆ ಕೈಯೊಡ್ಡಿದ ಎಂಜಿನಿಯರ್‌ ಬಂಧನ: ಲೋಕಾಯುಕ್ತ ಪೊಲೀಸರ ದಾಳಿ

ಬಿಲ್‌ ಮಂಜೂರಾತಿಗಾಗಿ ಕಮಿಷನ್‌ಗೆ ಬೇಡಿಕೆ: ಲೋಕಾಯುಕ್ತ ಪೊಲೀಸರ ದಾಳಿ
Published : 22 ಅಕ್ಟೋಬರ್ 2022, 19:22 IST
ಫಾಲೋ ಮಾಡಿ
Comments

ಕೋಲಾರ: ಗುತ್ತಿಗೆದಾರರಿಗೆ ಬಿಲ್‌ ಮಂಜೂರಾತಿಗಾಗಿ₹40 ಸಾವಿರ ಲಂಚಕ್ಕೆ ಕೈಯೊಡ್ಡಿದಜಿಲ್ಲೆಯ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಸ್‌.ಗುರುಶಂಕರ್‌ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರ ನರಸಾಪುರ ಕಾಫಿ ಡೇ ಬಳಿಯ ಫ್ಲೈಓವರ್‌ ಬಳಿ ಶುಕ್ರವಾರ ಸಂಜೆ ಅಧಿಕಾರಿಯು ಲಂಚ ಪಡೆಯುತ್ತಿದ್ದಾಗ ಕೋಲಾರ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಬಿ.ಕೆ.ಉಮೇಶ್‌ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಚೈತ್ರಾ ನೇತೃತ್ವದ ತಂಡ ದಾಳಿ
ನಡೆಸಿದೆ.

‘ಕಾಮಗಾರಿಯ ಬಿಲ್‌ ಹಣದಲ್ಲಿ ಶೇ 3 ಕಮಿಷನ್‌ ಹಾಗೂ ಹೆಚ್ಚುವರಿಯಾಗಿ ₹4 ಸಾವಿರ ಸೇರಿ ಒಟ್ಟು ₹ 40 ಸಾವಿರಕ್ಕೆ ಗುರುಶಂಕರ್‌ ಬೇಡಿಕೆ ಇಟ್ಟಿದ್ದರು’ ಎಂದು ಮಾಲೂರು ತಾಲ್ಲೂಕಿನ ಪ್ರಥಮದರ್ಜೆ ಗುತ್ತಿಗೆದಾರ ರಾಘವೇಂದ್ರ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT