ಮುಳಬಾಗಿಲು (ಕೋಲಾರ): 19 ದಿನದ ಹಿಂದೆ ಮೃತಪಟ್ಟಿದ್ದ ಯುವತಿಯ ಶವವನ್ನು ಬುಧವಾರ ಹೊರ ತೆಗೆದು ಅಧಿಕಾರಿಗಳ ಸಮ್ಮುಖದಲ್ಲಿ ಶವ ಪರೀಕ್ಷೆ ನಡೆಸಲಾಯಿತು.

ತಾಲ್ಲೂಕಿನ ಆವಣಿ ಹೋಬಳಿಯ ಬೊಮ್ಮಸಂದ್ರ ಗ್ರಾಮದ ವೆಂಕಟರಾಮ ರೆಡ್ಡಿ ಎಂಬುವವರ ಪುತ್ರಿ ಲಕ್ಷ್ಮಿ ಕುಮಾರಿ (23) ಆಗಸ್ಟ್ 9 ರಂದು ಮಂಚದ ಮೇಲಿನಿಂದ ಬಿದ್ದು ಗಾಯಗೊಂಡಿದ್ದರು. ಮುಳಬಾಗಿಲು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದ್ಯೊಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ಜಮೀನಿನಲ್ಲಿ ಅಂತ್ಯಕ್ರಿಯೆ ನಡೆದಿತ್ತು.

ಗ್ರಾಮಸ್ಥರ ಸಂಶಯದಂತೆ ಬೀಟ್ ಪೊಲೀಸ್ ಮಾಹಿತಿ ಆಧಾರಿಸಿ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳಲಾಗಿತು.ಅಧಿಕಾರಿಗಳು ಬುಧವಾರ ಯುವತಿಯ ಶವ ತೆಗೆದು ಶವ ಪರೀಕ್ಷೆ ನಡೆಸಿದರು.

ಜಿಲ್ಲಾ ಉಪ ವಿಭಾಗಾಧಿಕಾರಿ ಡಾ.ಮೈತ್ರಿ, ತಹಶೀಲ್ದಾರ್ ವಿ. ಗೀತಾ, ಸರ್ಕಲ್ ಇನ್ ಸ್ಪೆಕ್ಟರ್ ಕೆ.ಜಿ.ಸತೀಶ್ ಕುಮಾರ್ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅರುಣಗೌಡ ಪಾಟೀಲ ಸಮ್ಮುಖದಲ್ಲಿ ವೈದ್ಯರು ಶವ ಪರೀಕ್ಷೆ ನಡೆಸಿದರು.

‘ ಜಮೀನಿನಲ್ಲಿ ಹೂಳಲಾಗಿದ್ದ ಶವವನ್ನು ಹೊತೆಗೆದು ಪರೀಕ್ಷೆ ನಡೆಸಿ ಕೆಲವು ಅಂಗಾಂಗಗಳ ಮಾದರಿಗಳನ್ನು ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದಿಂದ ಬರುವ ಮಾಹಿತಿಯಿಂದ ಯುವತಿ ಯಾವ ಕಾರಣಕ್ಕೆ ಮೃತಪಟ್ಟಿರಬಹುದು ಎಂದು ತಿಳಿಯಲಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.