ಮುಳಬಾಗಿಲು: ತಾಲ್ಲೂಕಿನ ಚೀಕೂರು ಗ್ರಾಮದಲ್ಲಿ ಕೃಷಿ ಇಲಾಖೆ, ಜುವಾರಿ ಫಾರ್ಮಾ ಹಬ್ ಲಿಮಿಟೆಡ್ ಮತ್ತು ಜೈ ಕಿಸಾನ್ ಜಂಕ್ಷನ್ ಸಹಯೋಗದಲ್ಲಿ ರೈತರ ಸಮಾವೇಶ ಬುಧವಾರ ನಡೆಯಿತು.

ಕೃಷಿ ಇಲಾಖೆಯ ನಾಗರಾಜ್ ಬಿರಾದಾರ್ ಅವರು ಮಣ್ಣಿನ ಸವಕಳಿ, ತೇವಾಂಶ, ಮಣ್ಣಿನ ವಿಧಗಳು, ಮಣ್ಣಿನ ಸತ್ವಕ್ಕೆ ತಕ್ಕ ಬೆಳೆಗಳು ಸೇರಿದಂತೆ ಮತ್ತಿತರರ ವಿಚಾರಗಳ ಕುರಿತು ಮಾಹಿತಿ ನೀಡಿದರು.

ಕೃಷಿ ಅಧಿಕಾರಿ ಮನೋಹರ್ ಮಾತನಾಡಿ, ರೈತರು ಎಲ್ಲ ಋತುಗಳಲ್ಲಿ ಒಂದೇ ಬೆಳೆ ಬೆಳೆಯದೆ, ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇತ್ತೀಚಿಗೆ ತಾಲ್ಲೂಕಿನಾದ್ಯಂತ ಟೊಮೆಟೊ ಬೆಳೆಯನ್ನು ಅವೈಜ್ಞಾನಿಕವಾಗಿ ಬೆಳೆಯಲಾಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಟೊಮೆಟೊಗೆ ಬೇಡಿಕೆ ಕಡಿಮೆಯಾಗುತ್ತಿದೆ. ಹೀಗಾಗಿ ಟೊಮೆಟೊ ಋತುವಿನಲ್ಲಿ ಇತರೆ ಬೆಳೆಗಳನ್ನು ಬೆಳೆದು ಲಾಭ ಗಳಿಸಬಹುದು ಎಂದರು.

ಶಿವಕುಮಾರ್, ಸತೀಶ್ ಹಾಗೂ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.