ಕೋಲಾರ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಎಚ್ಐವಿ ಸೋಂಕಿತರ ಪ್ರಮಾಣ ಇಳಿಕೆಯಾಗುತ್ತಿದೆ. ಈ ವರ್ಷ ಏಪ್ರಿಲ್ನಿಂದ ಅಕ್ಟೋಬರ್ ಅಂತ್ಯದವರೆಗೆ 11 ಗರ್ಭಿಣಿಯರೂ ಸೇರಿದಂತೆ 224 ಜನರಲ್ಲಿ ಎಚ್ಐವಿ ಸೋಂಕು ಇರುವುದು ಪತ್ತೆಯಾಗಿದೆ. ವಿಶೇಷವೆಂದರೆ ಈ ಅವಧಿಯಲ್ಲಿ ಯಾವುದೇ ಮಗುವಿನಲ್ಲೂ ಸೋಂಕು ಕಂಡುಬಂದಿಲ್ಲ.

ಕಳೆದ ಏಳು ತಿಂಗಳಲ್ಲಿ 15,515 ಗರ್ಭಿಣಿಯರನ್ನು ಸೇರಿದಂತೆ 92,474 ಜನರ ಪರೀಕ್ಷೆ ನಡೆಸಲಾಗಿದೆ. 2024–25ರಲ್ಲಿ ಇದೇ ಅವಧಿಯ ಅಂಕಿ ಅಂಶ ಪರಿಶೀಲಿಸಿದರೆ 9 ಗರ್ಭಿಣಿಯರು ಸೇರಿದಂತೆ 287 ಮಂದಿಗೆ ಸೋಂಕು ಇತ್ತು. ಆಗ 16,382 ಗರ್ಭಿಣಿಯರನ್ನು ಸೇರಿದಂತೆ 91,876 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಜಿಲ್ಲೆಯಲ್ಲಿ 2009–10ರಲ್ಲಿ 837 ಸೋಂಕಿತರೊಂದಿಗೆ ಪಾಸಿಟಿವಿಟಿ ಪ್ರಮಾಣ ಶೇ 3.47ರಷ್ಟಿತ್ತು. 2015–16ರಲ್ಲಿ 44,936 ಜನರ ತಪಾಸಣೆ ಮಾಡಿದಾಗ 476 ಜನರಿಗೆ ಎಚ್ಐವಿ ಇರುವುದು ಪತ್ತೆಯಾಗಿತ್ತು. ಪಾಸಿಟಿವಿಟಿ ಪ್ರಮಾಣ ಶೇ 1.06ರಷ್ಟಿತ್ತು. 2020–21ರಲ್ಲಿ ಶೇ 0.52ಕ್ಕೆ ಇಳಿದಿತ್ತು. ಕಳೆದ ಸಾಲಿನಲ್ಲಿ ಶೇ 0.34 ಇದ್ದ ಸೋಂಕಿತರ ಪ್ರಮಾಣ ಈ ಬಾರಿ ಇಲ್ಲಿಯವರೆಗೆ ಶೇ 0.28ರಷ್ಟಿದೆ. ಗರ್ಭಿಣಿಯರಲ್ಲಿ ಪಾಸಿಟಿವಿಟಿ ದರ ಶೇ 0.07ರಷ್ಟಿದೆ. ನಿರಂತರ ಜಾಗೃತಿಯ ಪರಿಣಾಮ ವರ್ಷದಿಂದ ವರ್ಷಕ್ಕೆ ಇಳಿಯುತ್ತಾ ಬರುತ್ತಿದೆ.

ತಾಲ್ಲೂಕುವಾರು ಗಮನಿಸುವುದಾದರೆ ಕೋಲಾರ ತಾಲ್ಲೂಕಿನಲ್ಲಿ 135 ಮಂದಿಗೆ ಎಚ್ಐವಿ ಇದ್ದು, ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರುವ ಬಂಗಾರಪೇಟೆ ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲಿ ತಲಾ 23 ಎಚ್ಐವಿ ಸೋಂಕಿತರಿದ್ದಾರೆ.

2006ರಿಂದ ಇಲ್ಲಿಯವರೆಗೆ ಆ್ಯಂಟಿ ರೆಟ್ರೊ ವೈರಲ್ಥೆರಪಿ (ಎಆರ್ಟಿ) ಕೇಂದ್ರಗಳಲ್ಲಿ 11,088 ಜನರು ಚಿಕಿತ್ಸೆಗೆ ನೋಂದಾಯಿಸಿಕೊಂಡಿದ್ದಾರೆ. 4,499 ಜನರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿಯವರೆಗೆ 3,387 ಸೋಂಕಿತರು ಮರಣ ಹೊಂದಿದ್ದಾರೆ.

ಎಚ್ಐವಿ ಸೋಂಕು, ತಾಯಿಯಿಂದ ಮಗುವಿಗೆ ಬರದಂತೆ ತಡೆಯಲು ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾದ ತಕ್ಷಣವೇ ಎಆರ್ಟಿ ಚಿಕಿತ್ಸೆ ನೀಡಬೇಕು. ಹೆರಿಗೆ ನಂತರ ಮಗುವಿಗೆ 6 ವಾರ ಅಥವಾ 12 ವಾರ ನೆವರೆಪಿನ್ ದ್ರಾವಣ ನೀಡುವ ಮೂಲಕ ತಾಯಿಯಿಂದ ಮಗುವಿಗೆ ಬರುವ ಎಚ್ಐವಿ ಸೋಂಕನ್ನು ನಿಯಂತ್ರಿಸಲಾಗುವುದು. ಈ ಸೌಲಭ್ಯವು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದೆ ಎಂಬುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆ-2, ಆರ್.ಎಲ್.ಜಾಲಪ್ಪ ಆಸ್ಪತ್ರೆ, ಇಟಿಸಿಎಂ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಮುಳಬಾಗಿಲು, ಸಾರ್ವಜನಿಕ ಆಸ್ಪತ್ರೆ ಶ್ರೀನಿವಾಸಪುರ, ಸಾರ್ವಜನಿಕ ಆಸ್ಪತ್ರೆ ಬಂಗಾರಪೇಟೆ, ಸಾರ್ವಜನಿಕ ಆಸ್ಪತ್ರೆ ಮಾಲೂರು, ಸಾರ್ವಜನಿಕ ಆಸ್ಪತ್ರೆ ಕೆ.ಜಿ.ಎಫ್, ಬೆಮಲ್ ಮೆಡಿಕಲ್ ಸೆಂಟರ್ ಸೇರಿದಂತೆ ಒಟ್ಟು 10 ಐ.ಸಿ.ಟಿ.ಸಿ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಆಪ್ತ ಸಮಾಲೋಚಕರು ಹಾಗೂ ಪ್ರಯೋಗಶಾಲಾ ತಂತ್ರಜ್ಞರು ಸಾಮಾನ್ಯ ಪ್ರಕರಣಗಳಿಗೆ ಹಾಗೂ ಎಲ್ಲಾ ಗರ್ಭಿಣಿಯರಿಗೆ ಆಪ್ತ ಸಮಾಲೋಚನೆ ನೀಡುತ್ತಾರೆ. ಎಚ್ಐವಿ ರಕ್ತ ಪರೀಕ್ಷೆ ಮಾಡಲಾಗುತ್ತಿದೆ.

ಎಚ್ಐವಿ ಸೋಂಕಿತರಿಗೆ ಸೌಲಭ್ಯ: ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತರಿಗೆ ಸರ್ಕಾರದಿಂದ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಮಹಿಳಾ ಅಭಿವೃದ್ಧಿ ನಿಗಮದಿಂದ ಧನಶ್ರೀ ಯೋಜನೆ ಅಡಿಯಲ್ಲಿ 2024–25ನೇ ಸಾಲಿನಲ್ಲಿ149 ಎಚ್ಐವಿ ಸೋಂಕಿತ ಮಹಿಳೆಯರಿಗೆ ತಲಾ ₹ 30 ಸಾವಿರ ಸಹಾಯಧನ ನೀಡಲಾಗಿದೆ.

96 ಎಚ್ಐವಿ ಸೋಂಕಿತರಿಗೆ ಅನ್ನ ಅಂತ್ಯೋದಯ ಯೋಜನೆ ಅಡಿಯಲ್ಲಿ ರೇಷನ್ ಸೌಲಭ್ಯ ಒದಗಿಸಲಾಗಿದೆ. ವಿಶೇಷ ಪಾಲನಾ ಯೋಜನೆಯಡಿ ಎಚ್ಐವಿ ಸೋಂಕಿತ ಹಾಗೂ ಬಾಧಿತ 276 ಮಕ್ಕಳಿಗೆ ತಿಂಗಳಿಗೆ ₹ 2 ಸಾವಿರ ನೀಡಲಾಗುತ್ತಿದೆ. 4 ಮಂದಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.

ಈ ವರ್ಷ ‘ಎಚ್ಐವಿ, ಏಡ್ಸ್ ಹರಡುವಿಕೆಯನ್ನು ನಿಯಂತ್ರಿಸಲು ಇರುವ ಅಡೆತಡೆಗಳನ್ನು ಕೊನೆಗಾಣಿಸೋಣ’ ಎಂಬ ಘೋಷ ವಾಕ್ಯದಡಿ ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ.

ರಾಜ್ಯದಲ್ಲಿ 6751 ಮಂದಿಗೆ ಎಚ್ಐವಿ

ರಾಜ್ಯದಲ್ಲಿ 2025-26 ನೇ ಸಾಲಿನಲ್ಲಿ ಇಲ್ಲಿಯವರೆಗೆ 2199202 ಜನರನ್ನು ಪರೀಕ್ಷಿಸಿದ್ದು 6751 ಎಚ್ಐವಿ ಸೋಂಕಿತರು ಪತ್ತೆಯಾಗಿದ್ದು ಪಾಸಿಟಿವಿಟಿ ಪ್ರಮಾಣ 0.31ರಷ್ಟಿದೆ. 722837 ಗರ್ಭಿಣಿಯರನ್ನು ಪರೀಕ್ಷಿಸಲಾಗಿ 269 ಎಚ್ಐವಿ ಸೋಂಕಿತರು ಇರುವುದು ಪತ್ತೆಯಾಗಿದೆ. ಇದರ ಪಾಸಿಟಿವಿಟಿ ಪ್ರಮಾಣ 0.04ರಷ್ಟಿದೆ.

ಜಿಲ್ಲೆಯಲ್ಲಿ 36 ರೆಡ್ ರಿಬ್ಬನ್ ಕ್ಲಬ್

ಜಿಲ್ಲೆಯಲ್ಲಿ ಪದವಿ ಕಾಲೇಜು ಎಂಜಿನಿಯರಿಂಗ್ ಕಾಲೇಜು ನರ್ಸಿಂಗ್ ಕಾಲೇಜು ಸೇರಿ 36 ರೆಡ್ ರಿಬ್ಬನ್ ಕ್ಲಬ್ಗಳನ್ನು ಸ್ಥಾಪಿಸಿ ಜಾಗೃತಿ ಮೂಡಿಸಲಾಗುತ್ತಿದೆ. 190 ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಹದಿಹರೆಯದ ಆರೋಗ್ಯ ಶಿಕ್ಷಣ ತಿಳಿವಳಿಕೆ ನೀಡಲಾಗಿದೆ. ಜಿಲ್ಲೆಯಲ್ಲಿನ ಹಳ್ಳಿಮಟ್ಟದಲ್ಲಿ 182 ಎಚ್ಐವಿ/ಏಡ್ಸ್ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಏಡ್ಸ್ ನಿಯಂತ್ರಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.