ಶುಕ್ರವಾರ, ಜನವರಿ 24, 2020
16 °C
ಸ್ವಾಮಿ ವಿವೇಕಾನಂದ ಜಯಂತಿಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಸಲಹೆ

ವಿವೇಕಾನಂದರ ತ್ವತಾರ್ದಶ ಮೈಗೂಡಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಯುವಕರು ಶಿಕ್ಷಣ ಪಡೆದುಕೊಂಡಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂಬುದನ್ನು ಸ್ವಾಮಿ ವಿವೇಕಾನಂದರ ಉದ್ದೇಶವಾಗಿದ್ದು, ಅದನ್ನು ಈಡೇರಿಸುವ ನಿಟ್ಟಿನಲ್ಲಿ ಯುವಕರು ಮುಂದಾಗಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 157ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ವಿದ್ಯಾರ್ಥಿಗಳು ವಿವೇಕಾನಂದರ ತತ್ವ ಆದರ್ಶಗಳನ್ನು ಮೈಗೂಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು’ ಎಂದರು.

‘ಹಿಂದೆ ರಾಮಕೃಷ್ಣ ಉಡುಪ ಪ್ರಾಂಶುಪಾಲರಾಗಿದ್ದಾಗ ಕಾಲೇಜು ಫಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿತ್ತು, ಬದಲಾದ ಪರಿಸ್ಥಿತಿಯಿಂದ ಫಲಿತಾಂಶ ಹಿಂದೆ ಉಳಿದಿದೆ. ಪ್ರಾಧ್ಯಪಕರು ಜವಾಬ್ದಾರಿ ಅರಿತು ಕೆಲಸ ಮಾಡಿ ಫಲಿತಾಂಶವನ್ನು ಉತ್ತಮಪಡಿಸಬೇಕು’ ಎಂದು ಸೂಚಿಸಿದರು.

‘ಇಲ್ಲಿನ ವ್ಯಾಸಂಗ ಮಾಡಿದವರು ರಾಜಕೀಯವಾಗಿ, ವಿವಿಧ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿ ಅನೇಕ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಾಧನೆಯನ್ನು ಸ್ಪೂರ್ತಿಯಾಗಿ ಪಡೆದುಕೊಂಡು ಸದೃಢ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.

‘ಕಾಲೇಜಿನ ಈಗಿನ ಫಲಿತಾಂಶ ಗಮನಿಸಿದರೆ ಬೇಸರವಾಗುತ್ತದೆ. ವಿದ್ಯಾರ್ಥಿಗಳು ಹೊರಗಡೆ ಓಡಾಡುತ್ತಿರುವುದನ್ನು ನೋಡಿದರೆ ಕಾಲೇಜು ನಡೆಯುತ್ತಿದಿಯೋ ಇಲ್ಲವೊ ಎನ್ನಿಸುತ್ತದೆ. ಪೋಷಕರು ಆಸೆಗಳನ್ನು ಹೊತ್ತು ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಾರೆ. ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಪ್ರಯೋಜನೆ ಕಲ್ಪಿಸಬೇಕು’ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ವಿ.ಪುರುಷೋತ್ತಮ್ ಮಾತನಾಡಿ, ‘ಸ್ವಾಮಿ ವಿವೇಕಾನಂದರು ಅಧ್ಯಾತ್ಮಿಕ ಚಿಂತನೆ ಮೂಲಕವೇ ಸಮಾಜವನ್ನು ಸರಿದಾರಿಯತ್ತ ಕೊಂಡೊಯುವ ಕೆಲಸ ಮಾಡಿದರು’ ಎಂದರು.

‘ದೇಶದಲ್ಲಿ ಶೇ.50ರಷ್ಟು ಭಾಗ ಯುವಕರಿದ್ದಾರೆ. ಮಾರ್ಗದರ್ಶನದ ಕೊರತೆಯಿಂದಾಗಿ ತಪ್ಪು ದಾರಿ ಹಿಡಿಯುತ್ತಿದ್ದರು. ವಿವೇಕಾನಂದರು ಎಚ್ಚರಿಸುವ ಮೂಲಕ ಬಲಿಷ್ಠ ಭಾರತ ಕಟ್ಟುವಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಿದರು’ ಎಂದರು.

‘ಪ್ರಪಂಚದಲ್ಲಿ ಭಾರತ ದೇಶ ತನ್ನದೆ ಅದ ಪ್ರತಿಷ್ಠಿತೆ ಪಡೆದುಕೊಂಡಿದೆ. ರಾಮಕೃಷ್ಣ ಪರಮಹಂಸರ ಮಾರ್ಗದರ್ಶನದಲ್ಲಿ ಬೆಳೆದ ವಿವೇಕಾನಂದ ಅವರು ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುವುದರ ಜತೆಗೆ ದೇಶದ ಆದರ್ಶ ಪುರುಷರಾಗಿದ್ದರು’ ಎಂದಿ ಹೇಳಿದರು.

‘ಅಮೆರಿಕಾದ ಚಿಕಾಗೋದಲ್ಲಿ ನಡೆದ ಸರ್ವ ಧರ್ಮಗಳ ಸಭೆಯಲ್ಲಿ ಮಾಡಿದ ಭಾಷಣದಿಂದಲೇ ಯುವಕರ ಶಕ್ತಿಯಾಗಿದ್ದಾರೆ. ಹೇಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಘೋಷಣೆ ಯುವಕರ ಸ್ಪೂರ್ತಿಯಾಗಿದ್ದಾರೆ’ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನಾ ನಗರದ ಗಾಂಧಿನ ಉದ್ಯಾನದಿಂದ ಕಾಲೇಜಿತನಕ ಯುವ ಜಾಗೃತಿ ಜಾಥಾ ನಡೆಯಿತು.

ಪ್ರಾಂಶುಪಾಲೆ ಪ್ರೊ.ಮಧುಲತಾ ಮೋಸಸ್, ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕಿ ದೇವಿಕಾ, ಕಾಲೇಜಿನ ಅಭಿವೃದ್ದಿ ಸಮಿತಿ ಸದಸ್ಯರಾದ ಅನಿತಾ, ಭರತ್, ನಗರಸಭಾ ಸದಸ್ಯ ರಾಕೇಶ್, ಸಹ ಪ್ರಾಧ್ಯಪಕರಾದ ಆರ್.ಶಂಕರಪ್ಪ, ಮಹಿಳಾ ಕಾಲೇಜಿನ ಪ್ರಾಂಶುಪಾಲೆ ವೃಂದಾದೇವಿ, ಎನ್.ಕೃಷ್ಣಪ್ಪ, ಮಾಲೂರು ಪ್ರಾಂಶುಪಾಲ ಕೇಶವರೆಡ್ಡಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು