ಗುರುವಾರ , ಜುಲೈ 29, 2021
21 °C

ಚಿನ್ನದ ಗಣಿ ಕಳ್ಳತನಕ್ಕೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್‌: ಬಿಜಿಎಂಎಲ್‌ (ಚಿನ್ನದ ಗಣಿ)ಗೆ ಸೇರಿದ ನಂದಿ ದುರ್ಗ ಮೈನ್ಸ್‌ನಲ್ಲಿ ಕಳ್ಳತನ ಮಾಡಲು ವಿಫಲ ಯತ್ನ ನಡೆದಿದೆ.

ನಂದಿ ದುರ್ಗ ಮೈನ್ಸ್‌ಗೆ ಬುಧವಾರ ಚಿನ್ನದ ಮಿಶ್ರಿತ ಮಣ್ಣನ್ನು ಕದಿಯಲು ಕಳ್ಳರ ಒಂದು ತಂಡ ಬಂದಿತ್ತು. ಚಿನ್ನದ ಅದಿರನ್ನು ಕೊರೆಯಲು ತಮ್ಮೊಂದಿಗೆ ವಿದ್ಯುತ್ ಚಾಲಿತ ಡ್ರಿಲ್ಲಿಂಗ್ ಯಂತ್ರವನ್ನು ಸಹ ತಂದಿದ್ದರು. ಗಣಿಯೊಳಗೆ ತಂದಿದ್ದ ಬುತ್ತಿಯನ್ನು ಸೇವಿಸಿ ಕಳ್ಳತನಕ್ಕೆ ಯತ್ನ ನಡೆಸಿತ್ತು. ಮಾಹಿತಿ ತಿಳಿದ ಹಿರಿಯ ಅಧಿಕಾರಿಗಳು ಮಿಲ್‌ಗೆ ಹೋಗುವಷ್ಟರಲ್ಲಿ ಅವರು ಓಡಿಹೋಗಿದ್ದಾರೆ ಎಂದು ಭದ್ರತಾ ವಲಯದ ಮೂಲಗಳು ತಿಳಿಸಿವೆ.

ಈಚೆಗೆ ಇದೇ ರೀತಿ ಮಾರಿಕುಪ್ಪಂನಲ್ಲಿರುವ ಚಿನ್ನದ ಗಣಿಗೆ ಇಳಿದಿದ್ದ ಕಳ್ಳರ ತಂಡದ ಮೂವರು ಉಸಿರುಗಟ್ಟಿ ಮೃತಪಟ್ಟಿದ್ದರು. ಒಬ್ಬನ ಶವ ಇನ್ನೂ ಗಣಿಯೊಳಗೆ ಇದೆ. ಇಂತಹ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಇದ್ದರೂ, ಕಳ್ಳರು ಗಣಿಗೆ ನುಗ್ಗಿರುವುದು ಆಶ್ವರ್ಯ ತಂದಿದೆ. ಬಿಜಿಎಂಎಲ್ ಮುಖ್ಯ ಭದ್ರತಾ ಅಧಿಕಾರಿ ಪನ್ಸಂಬಾಲ್‌ ಊರಿಗಾಂ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು