ಜಿಲ್ಲೆಯ ಗ್ರಾ. ಪಂಗಳಲ್ಲಿ ತೆರಿಗೆ ವಸೂಲಿ ಈ ವರೆಗೆ ₹ 25 ಕೋಟಿ ದಾಟಿರಲಿಲ್ಲ. ಈ ಬಾರಿ ₹ 42.29 ಕೋಟಿ ಸಂಗ್ರಹವಾಗಿದ್ದು ಪಂಚಾಯಿತಿಗಳು ಸ್ವಾವಲಂಬನೆ ಸಾಧಿಸುವತ್ತ ದಾಪುಗಾಲು ಇಟ್ಟಿವೆ
ಬಿ.ಶಿವಕುಮಾರ್ ಉಪಕಾರ್ಯದರ್ಶಿ ಜಿಲ್ಲಾ ಪಂಚಾಯಿತಿ ಕೋಲಾರ
ಕರ ವಸೂಲಿ; ಮಾಲೂರು ಪ್ರಥಮ
ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಾತಿಯಲ್ಲಿ ತಾಲ್ಲೂಕುವಾರು ಪರಿಗಣಿಸಿದರೆ ಮಾಲೂರು ಮೊದಲ ಸ್ಥಾನದಲ್ಲಿದೆ. ₹ 16.59 ಕೋಟಿ ಸಂಗ್ರಹದೊಂದಿಗೆ ಶೇ 91.67 ಸಾಧನೆ ಮಾಡಿದೆ. ಹಲವಾರು ಗ್ರಾಮಗಳು ಶೇ 100 ಸಾಧನೆ ಮಾಡಿವೆ. ಮುಳಬಾಗಿಲು ನಂತರ ಸ್ಥಾನದಲ್ಲಿದೆ. ಶೇ 79.72 ಸಾಧನೆ ಮಾಡಿರುವ ಶ್ರೀನಿವಾಸಪುರ ತಾಲ್ಲೂಕು ಕೊನೆಯ ಸ್ಥಾನದಲ್ಲಿದೆ.