ತೇರಹಳ್ಳಿ ಬೆಟ್ಟದ ಗ್ರಾಮಗಳಲ್ಲಿ ಬೇಸಿಗೆ ಕಾಲದಲ್ಲಿ ಟ್ಯಾಂಕರ್‌ನಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ
ನೀರಿನ ಸಮಸ್ಯೆ ಹಾಗೂ ಮೂಲಸೌಲಭ್ಯ ಕೊರತೆ ಹೇಳಿಕೊಂಡ ತೇರಹಳ್ಳಿ ಬೆಟ್ಟದ ಆದಿಮ (ಶಿವಗಂಗೆ) ಗ್ರಾಮಸ್ಥರು
ತೇರಹಳ್ಳಿ ಗ್ರಾಮದಲ್ಲಿರುವ ಕಲ್ಯಾಣಿ
ತೇರಹಳ್ಳಿ ಬೆಟ್ಟದಲ್ಲಿರುವ ಬಾವಿ
ಶುದ್ಧ ನೀರಿಗೆ ಇನ್ನೆಷ್ಟು ದಿನ ಕಾಯಬೇಕು?
ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ಗಂಜಲದಂತೆ ಕಾಣುತ್ತದೆ ವಾಸನೆ ಬರುತ್ತದೆ. ಇನ್ನೆಷ್ಟು ದಿನ ಶುದ್ಧ ಕುಡಿಯುವ ನೀರಿಗಾಗಿ ನಾವು ಕಷ್ಟಪಡಬೇಕು? ಬಟ್ಟೆ ತೊಳೆಯಲು ಸ್ನಾನ ಮಾಡಲು ಕುಡಿಯಲು ಅಡುಗೆಗೆ ಮಣ್ಣು ಮಿಶ್ರಿತ ನೀರನ್ನೇ ಬಳಸಬೇಕಾಗಿದೆ. ನಾವೇನೋ ಸೋಸಿ ನೀರು ಕುಡಿಯುತ್ತೇವೆ. ಆದರೆ ಮಕ್ಕಳು ಶಿಶುಗಳು ಗರ್ಭಿಣಿಯರ ಗತಿಯೇನು? ಈ ನೀರಿನಲ್ಲಿ ಸ್ನಾನ ಮಾಡಿಸಿದರೆ ಮಕ್ಕಳ ಮೈಮೇಲೆ ಗುಳ್ಳೆ ಬರುತ್ತದೆ. ಇನ್ನು ಶೀತ ಜ್ವರ ಸಾಮಾನ್ಯವಾಗಿದೆ. ದೂರದಿಂದ ಬಿಂದಿಗೆಗಳಲ್ಲಿ ನೀರು ತರಬೇಕಿದೆ. ನೀರನ್ನು ಡ್ರಮ್‌ಗಳಲ್ಲಿ ಸಂಗ್ರಹಿಸಿಟ್ಟರೆ ವಾಸನೆ ಬರುತ್ತದೆ. ಬೇಸಿಗೆಯಲ್ಲಿ ನಮ್ಮ ಪರಿಸ್ಥಿತಿ ಹೇಳತೀರದು –ತೇರಹಳ್ಳಿ ಆದಿಮ (ಶಿವಗಂಗೆ) ಗ್ರಾಮದ ಮಹಿಳೆಯರು