197 ಮತ ಅಮಾನ್ಯಗೊಂಡಿದ್ದೇಕೆ?
ಮಾಲೂರು ಕ್ಷೇತ್ರದಲ್ಲಿ ಅಮಾನ್ಯಗೊಂಡ 197 ಮತಗಳಿವೆ. ಅವುಗಳು ಏಕೆ ಅಮಾನ್ಯಗೊಂಡಿವೆ ಮತ್ತೆ ಮಾನ್ಯ ಆಗಬಹುದೇ ಎಂಬುದನ್ನೂ ಪರಿಶೀಲಿಸಬೇಕು. ಗೆಜೆಟೆಡ್ ಅಧಿಕಾರಿಯ ಸಹಿ ಇಲ್ಲವೆಂದು ಅಮಾನ್ಯ ಮಾಡಿರುತ್ತಾರೆ. ಮತದಾನ ಆಗಿರುವ ಮತಗಳನ್ನು ತಿರಸ್ಕಾರ ಮಾಡಬಾರದು. ಅದು ಯಾವುದೇ ಅಭ್ಯರ್ಥಿಗೆ ಬರಲಿ. ಜಯನಗರ ಕ್ಷೇತ್ರದಲ್ಲಿ ಬಿಜೆಪಿಯ ರಾಮಮೂರ್ತಿ ಮೊದಲು ಸೋತಿರುತ್ತಾರೆ. ಎದುರಾಳಿ ಸ್ಪರ್ಧಿ ಕಾಂಗ್ರೆಸ್‌ನ ಸೌಮ್ಯರೆಡ್ಡಿ ಇದ್ದು ಮರು ಎಣಿಕೆ ನಡೆಯುತ್ತದೆ. ಆಗ ಕೆಲ ಅಮಾನ್ಯ ಮತಗಳನ್ನು ಕಾನೂನು ರೀತಿ ಮಾನ್ಯ ಮಾಡಲಾಗುತ್ತದೆ ಎಂದು ಕೆ.ಎಸ್.ಮಂಜುನಾಥ್ ಗೌಡ ತಿಳಿಸಿದರು.