ಮುಳಬಾಗಿಲು: ದೇಶದಾದ್ಯಂತ ಮತ ಕಳವು ಖಂಡಿಸಿ ಸಹಿ ಸಂಗ್ರಹವಾಗುತ್ತಿದ್ದು, ರಾಜ್ಯದಲ್ಲಿ ಈಗಾಗಲೇ 1.9 ಕೋಟಿ ಸಂಗ್ರಹವಾಗಿದೆ. ಮುಳಬಾಗಿಲಿನಲ್ಲಿ 29 ಸಾವಿರ ಸಹಿ ಸಂಗ್ರಹಣೆಯಾಗಿದ್ದು, ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ ಕರೆ ನೀಡಿದರು.

ನಗರದ ಹೊರವಲಯದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪಕ್ಷದ ಮುಂಚೂಣಿ ಘಟಕಗಳ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶದಲ್ಲಿ ಓಟ್ ಚೋರ್ ಮಾಡಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದನ್ನು ಕಂಡು ಹಿಡಿದ ರಾಹುಲ್ ಗಾಂಧಿ ಅವರ ಆದೇಶಗಳನ್ನು ಪಕ್ಷದ ಮುಖಂಡರಿಂದ ಹಿಡಿದು ತಳಹಂತದ ಕಾರ್ಯಕರ್ತರು ಪಾಲಿಸಿದರೆ ಮುಂದಿನ ದಿನಗಳಲ್ಲಿ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ರಾಷ್ಟ್ರವನ್ನು ಬಿಜೆಪಿ ಮತ್ತು ಆರ್ಎಸ್ಎಸ್ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು. ಅದಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಮುಂದಾಗಬೇಕು ಎಂದರು.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಗೊಂದಲದಿಂದ ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಆಯ್ಕೆಯಾದ ಹಿನ್ನೆಲೆ ತಾಲ್ಲೂಕಿನಲ್ಲಿ ಸೋಲು ಅನುಭವಿಸಬೇಕಾಯಿತು. ತಾಲ್ಲೂಕಿನಲ್ಲಿ ಜೆಡಿಎಸ್ ಶಾಸಕ ಇರುವುದರಿಂದ ಅಭಿವೃದ್ಧಿ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಹಾಗಾಗಿ ಲೋಪಗಳನ್ನು ಸರಿಪಡಿಸಿಕೊಂಡು ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ವಿ.ಆದಿನಾರಾಯಣ, ಕೆ.ವಿ.ಗೌತಮ್, ಜಿ.ರಾಮಲಿಂಗಾರೆಡ್ಡಿ, ಉತ್ತನೂರು ಶ್ರೀನಿವಾಸ್, ಲಕ್ಷ್ಮಿ ನಾರಾಯಣ, ಅಮಾನುಲ್ಲ, ಕೊತ್ತೂರು ಗೆಂಗಿರೆಡ್ಡಿ, ಆರ್.ಆರ್.ರಾಜೇಂದ್ರ ಗೌಡ, ಅಲಂಗೂರು ಶಿವಣ್ಣ, ಕೊತ್ತೂರು ಆರ್.ಆಂಜನೇಯಲು, ಗೋಪಾಲ್, ನೀಲಾವತಿ, ಎಂ.ಎನ್. ಶಂಕರನಾರಾಯಣ, ಸಿದ್ದಘಟ್ಟ ಮುನಿಸ್ವಾಮಿಗೌಡ, ಉಮಾಶಂಕರ್, ಗುಜ್ಜನಹಳ್ಳಿ ಮಂಜುನಾಥ್, ಹನುಮನಹಳ್ಳಿ ಸುಬ್ರಮಣಿ, ಗೊಲ್ಲಹಳ್ಳಿ ವೆಂಕಟೇಶ್, ಆರ್.ಎಸ್.ಸುಹಾಸ್, ಅರಹಳ್ಳಿ ಶ್ರೀನಿವಾಸಗೌಡ, ಎಂ.ಮುನಿರಾಜು, ಜಬಿವುಲ್ಲಾ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.