ಮಂಗಳವಾರ, ಜನವರಿ 26, 2021
23 °C

‘ದೇಶಕ್ಕಾಗಿ ಎಲ್ಲಾ ಭಾಷಿಕರು ಒಂದೇ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ‘ಮಾತೃಭಾಷೆಯನ್ನು ಪ್ರೇಮಿಸುತ್ತಿದ್ದರೂ, ದೇಶದ ವಿಷಯ ಬಂದಾಗ ಎಲ್ಲಾ ಭಾಷಿಕರು ಒಂದೇ ಎನ್ನುವ ಭಾವನೆಯನ್ನು ಭಾರತೀಯರು ಹೊಂದಿದ್ದಾರೆ. ಇದು ವಿವಿಧತೆಯಲ್ಲಿ ಏಕತೆಯ ದ್ಯೋತಕ’ ಎಂದು ನ್ಯಾಯಾಧೀಶ ದಯಾನಂದ ಹಿರೇಮಠ ಹೇಳಿದರು.

ರಾಬರ್ಟಸನ್‌ಪೇಟೆಯ ವಿವೇಕಾನಂದ ಶಾಲೆಯಲ್ಲಿ ಶನಿವಾರ ರಾಷ್ಟ್ರೀಯ ಏಕತಾ ದಿನಾಚರಣೆ ಮತ್ತು ಭಾಷಾ ಸೌಹಾರ್ದ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಜಿಎಫ್ ನಗರದಲ್ಲಿ ವಿವಿಧ ಭಾಷೆ ಮಾತನಾಡುವ ಜನ ಹೆಚ್ಚಾಗಿದ್ದಾರೆ. ಆದರೆ ಎಲ್ಲರೂ ಅಣ್ಣ, ತಮ್ಮಂದಿರ ರೀತಿಯಲ್ಲಿ ಬಾಳ್ವೆ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿದೆ. ಭಾಷೆ ಮತ್ತು ದೇಶದ ಬಗ್ಗೆ ನಾವು ತೋರುತ್ತಿರುವ ಪ್ರೀತಿಯನ್ನು ಇದು ತೋರಿಸುತ್ತದೆ ಎಂದು ಹೇಳಿದರು.

ನ್ಯಾಯಾಧೀಶೆ ಎಂ.ಡಿ. ರೂಪಾ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಸಿ. ನಾಗರಾಜ್, ಕನ್ನಡ ಸಂಘ, ತಮಿಳು ಸಂಘ ಮತ್ತು ಮಲಯಾಳಿ ಸಂಘಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.