ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೇತಮಂಗಲ | ಅನೈತಿಕ ಚಟುವಟಿಕೆ ತಾಣ ಬಸ್‌ ತಂಗುದಾಣ: ಸಾರ್ವಜನಿಕರ ಆಕ್ರೋಶ

ಮಂಜುನಾಥ್.ವಿ
Published 20 ಆಗಸ್ಟ್ 2024, 5:04 IST
Last Updated 20 ಆಗಸ್ಟ್ 2024, 5:04 IST
ಅಕ್ಷರ ಗಾತ್ರ

ಬೇತಮಂಗಲ: ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿಯ ಬಿಲ್ಲೇರಹಳ್ಳಿ ಗ್ರಾಮದ ಗೇಟ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ಬಸ್‌ ತಂಗುದಾಣ ನಿರ್ವಹಣೆ ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಬೇತಮಂಗಲ–ಕ್ಯಾಸಂಬಳ್ಳಿ ಮಾರ್ಗ ಮಧ್ಯದಲ್ಲಿರುವ ಬಸ್‌ ತಂಗುದಾಣವನ್ನು ವಿಧಾನ ಪರಿಷತ್ ಸದಸ್ಯರ ₹5 ಲಕ್ಷ ಅನುದಾನದಲ್ಲಿ ಈಚೆಗೆ ನಿರ್ಮಿಸಲಾಗಿದೆ. ಈಗ ಇದು ಮದ್ಯ ಮತ್ತು ಧೂಮಪಾನ ಮಾಡುವವರ ಅಡ್ಡೆಯಾಗಿದೆ. ಸರಿಯಾಗಿ ನಿರ್ವಹಣೆ ಮಾಡದ ಕಾರಣ ನಿಲ್ದಾಣದಲ್ಲಿ ತ್ಯಾಜ್ಯ ತುಂಬಿದೆ.

ಮದ್ಯಪಾನ ಮಾಡಿದವರು ಬಾಟಲಿ ಮತ್ತು ಆಹಾರ ತ್ಯಾಜ್ಯವನ್ನು ಇಲ್ಲಿ ಬೀಸಾಡಿ ಹೋಗುತ್ತಾರೆ. ಧೂಮಪಾನ ಹಾಗೂ ಮದ್ಯಪಾನ ಮಾಡುವುದರಿಂದ ತಂಗುದಾಣ ಸಂಪೂರ್ಣವಾಗಿ ದುರ್ವಾಸನೆ ಬಿರುತ್ತಿದೆ. ಇದರಿಂದ ಜನ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಅಹಸ್ಯ ಪಡುವಂತಾಗಿದೆ. ಹೀಗಾಗಿ ಜನ ತಂಗುದಾಣದ ಹೊರಗೆ ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

₹5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಬಸ್‌ ತಂಗುದಾಣ ಉಪಯೋಗಕ್ಕೆ ಬರುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಲ್ಲೇರಹಳ್ಳಿ ಗ್ರಾಮದಿಂದ ನಿತ್ಯ ಶಾಲಾ ಹಾಗೂ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ತಂಗುದಾಣಕ್ಕೆ ಬರುತ್ತಾರೆ. ಆದರೆ ತಂಗುದಾಣದ ದುಸ್ಥಿತಿ ಕಂಡು ಹೊರಗೆ ಮಳೆ, ಬಿಸಿಲಿನಲ್ಲೇ ನಿಲ್ಲಬೇಕಿದೆ.

ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಪೊಲೀಸ್ ಠಾಣೆಯ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಿಲ್ಲೇರಹಳ್ಳಿ ಬಸ್‌ ತಂಗುದಾಣದ ಸಮಸ್ಯೆ ಗಮನಕ್ಕೆ ಬಂದಿದೆ. ಶೀಘ್ರವೇ ನಿಲ್ದಾಣ ಸ್ವಚ್ಛಗೊಳಿಸಿ, ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಲು ಕ್ರಮವಹಿಸಲಾಗುದು
ರಶ್ಮಿ, ಪಿಡಿಒ, ಕ್ಯಾಸಂಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT