ಭಾನುವಾರ, ಸೆಪ್ಟೆಂಬರ್ 26, 2021
22 °C
ಗ್ರಾ.ಪಂ ಸಂಪನ್ಮೂಲ ವ್ಯಕ್ತಿಗಳಿಗೆ ಕಾರ್ಯಾಗಾರ

ಸಾಮಾಜಿಕ ಪರಿಶೋಧನೆ ನಡೆಸಿ ವರದಿ ನೀಡಿ: ಮುನಿರಾಜು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನರೇಗಾ ಜತೆಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಟಾನದಲ್ಲಿನ ಲೋಪದೋಗಳ ಕುರಿತು ಸಾಮಾಜಿಕ ಪರಿಶೋಧನೆ ನಡೆಸಲು ಗ್ರಾಮ ಪಂಚಾಯಿತಿ ಸಂಪನ್ಮೂಲ ವ್ಯಕ್ತಿಗಳು ಮುಂದಾಗಬೇಕು’ ಎಂದು ಹಾಯಕ ಯೋಜನಾ ನಿರ್ದೇಶಕ ಮುನಿರಾಜು ಸಲಹೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಗ್ರಾಮ ಪಂಚಾಯಿತಿ ಸಂಪನ್ಮೂಲ ವ್ಯಕ್ತಿಗಳಿಗಾಗಿ ಹಮ್ಮಿಕೊಂಡಿದ್ದ ಸಾಮಾಜಿಕ ಪರಿಶೋಧನಾ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ‘ವೃದ್ದಾಪ್ಯ, ಅಂಗವಿಕಲ, ವಿಧವಾ, ಸಂಧ್ಯಾ ಸುರಕ್ಷಾ ಪಿಂಚಣಿ ಯೋಜನೆಗಳ ಅನುಷ್ಟಾನದಲ್ಲಿನ ಲೋಪದೋಷಗಳ ಕುರಿತು ಸಾಮಾಜಿಕ ಪರಿಶೋಧನೆ ನಡೆಸಬೇಕಾಗ ಅತ್ಯವಿದೆ’ ಎಂದು ತಿಳಿಸಿದರು.

‘ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟ, ಉದ್ಯೋಗ ಸೃಜನ, ಬಿಡುಗಡೆಯಾಗಿರುವ ಅನುದಾನಕ್ಕೆ ತಕ್ಕಂತೆ ಕಾಮಗಾರಿ ನಡೆದಿರುವ ಕುರಿತು ಖಾತರಿ ಕುರಿತು ಸಂಪನ್ಮೂಲ ವ್ಯಕ್ತಿಗಳು ಪರಿಶೋಧನೆ ನಡೆಸಿ ವರದಿ ನೀಡುತ್ತಿರಬೇಕು’ ಎಂದು ಹೇಳಿದರು.

‘ಸರ್ಕಾರ ನಿಮಗೆ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಪರಿಶೋಧನೆಯ ಹೊಸ ಜವಾಬ್ದಾರಿ ನೀಡಿದ್ದು, ಸಮರ್ಪಕವಾಗಿ ನಿರ್ವಹಿಸಬೇಕು’ ಎಂದರು.

ಮುಖ್ಯ ತರಬೇತುದಾರರಾಗಿ ಆಗಮಿಸಿರುವ ಜಿಲ್ಲಾ ಸಂಯೋಜಕ ಎ.ಜಿ.ಬೀರೇಶ್ ಮಾತನಾಡಿ, ‘ಪ್ರತಿ ಗ್ರಾಮ ಪಂಚಾಯಿತಿಗೂ ನೇಮಕಗೊಂಡಿರುವ ಸಂಪನ್ಮೂಲ ವ್ಯಕ್ತಿಗಳು ನರೇಗಾ ಯೋಜನೆಯ ಪ್ರಗತಿ, ಕೈಗೊಂಡಿರುವ ಕಾಮಗಾರಿಗಳ ವರದಿಯನ್ನು ಗ್ರಾಮ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕು’ ಎಂದು ತಿಳಿಸಿದರು.

‘ಅನುಮೋದನೆಯ ಪ್ರತಿಗಳನ್ನು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಿಗೆ ಮತ್ತು ಒಂದು ಪ್ರತಿಯನ್ನು ಬೆಂಗಳೂರಿನ ಸಾಮಾಜಿಕ ಪರಿಶೋಧನಾ ನಿರ್ದೇಶನಲಾಯಕ್ಕೆ ಕಳುಹಿಸಬೇಕು’ ಎಂದರು.

‘ಸಾಮಾಜಿಕ ಭದ್ರತಾ ಯೋಜನೆಗಳ ಪರೀಶೋಧನೆಯನ್ನು ನೀವು ನಡೆಸಬೇಕು. ಇದು ಸಮರ್ಪಕವಾಗಿ ಫಲಾನುಭವಿಗೆ ತಲುಪುತ್ತಿದೆಯೇ, ಲೋಪಗಳಿವೆಯೇ ಎಂಬುದರ ಕುರಿತು ಗಮನಹರಿಸಿ ವರದಿ ನೀಡಬೇಕು’ ಎಂದು ಸಲಹೆ ನೀಡಿದರು.

‘14ನೇ ಹಣಕಾಸು ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಪರಿಶೋಧನೆ ಮಾಡಬೇಕು. ಕಾಮಗಾರಿಯ ಗುಣಮಟ್ಟ, ಜಾಬ್‌ಕಾರ್ಡ್ ನೀಡಿಕೆ, ಖಾತೆಗೆ ಹಣ ಸಂದಾಯ, ಉದ್ಯೋಗ ಸೃಜನಗೊಂಡಿರುವ ಕುರಿತು ಮತ್ತು ಕಾಮಗಾರಿಯನ್ನು ಕೂಲಿ ಕಾರ್ಮಿಕರಿಂದಲೇ ಮಾಡಿಸಿದ್ದಾರೆಯೇ ಎಂಬುದರ ಕುರಿತು ಪರಿಶೋಧನೆ ನಡೆಸಬೇಕು’ ಎಂದು ವಿವರಿಸಿದರು.

‘ನರೇಗಾ ಕಾಮಗಾರಿಗಳ ಪರಿಶೋಧನೆ ನಡೆಸುವಾಗ ಯಾರೋ ಹೇಳಿದ್ದನ್ನು ಬರೆದು ವರದಿ ತಯಾರಿಸಬೇಡಿ. ನೀವೇ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ. ನೀಡಿರುವ ಅನುದಾನ, ಉದ್ಯೋಗ ಸೃಷ್ಟಿ, ಕಾಮಗಾರಿಯ ಗುಣಮಟ್ಟ ನೋಡಿ ವರದಿ ತಯಾರಿಸಿ’ ಎಂದು ಹೇಳಿದರು.

ತಾಲ್ಲೂಕು ಸಂಯೋಜಕರಾದ ಬಂಗಾರಪೇಟೆಯ ರವಣಪ್ಪ, ಮುಳಬಾಗಿಲಿನ ವೆಂಕಟರಮಣ, ಕೋಲಾರದ ಭಾಷಾ, ಮಾಲೂರಿನ ಆಯಿಷಾ ಸುಲ್ತಾನ್, ಶ್ರೀನಿವಾಸಪುರದ ಶ್ರೀನಿವಾಸ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು