ಕೋಲಾರ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ಕ್ಷೇತ್ರದಲ್ಲೂ ತಂತ್ರಜ್ಞಾನ ಅಳವಡಿಕೆಯಾಗುತ್ತಿದ್ದು, ಶಿಕ್ಷಣ ಕ್ಷೇತ್ರಕ್ಕೂ ತಂತ್ರಜ್ಞಾನ ವಿಸ್ತರಣೆ ಮಾಡಿ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗುತ್ತಿದೆ’ ಎಂದು ಸಂಸದ ಎಸ್.ಮುನಸ್ವಾಮಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಟಾಟಾ ಪವರ್ ಸೋಲಾರ್ ಹಾಗೂ ಬೆಂಗಳೂರು ರೋಟರಿ ದಕ್ಷಿಣ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಸೋಲಾರ್ ಪವರ್ಡ್ ಡಿಜಿಟಲ್ ಲಿಟ್ರಸಿ ಇನೋವೇಷನ್ ಪ್ರಾಜೆಕ್ಟ್’ ಅಡಿ ಜಿಲ್ಲೆಯ 130 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ಗೆ ಅಗತ್ಯವಾದ ಸಲಕರಣೆ ವಿತರಿಸಿ ಮಾತನಾಡಿದರು.

‘ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಸ್ಮಾರ್ಟ್ ಕ್ಲಾಸ್ ನಡೆಸುವಂತಾಗಬೇಕು. ಇದಕ್ಕೆ ಪೂರಕವಾಗಿ ತರಬೇತಿ ನೀಡುತ್ತಿರುವುದು ಸ್ವಾಗತಾರ್ಹ. ಖಾಸಗಿ ಕಂಪನಿಗಳು ಸಿಎಸ್ಆರ್ ಅನುದಾನದಲ್ಲಿ ಸರ್ಕಾರಿ ಶಾಲೆಗಳಿಗೆ ಲ್ಯಾಬ್, ಕಂಪ್ಯೂಟರ್, ಕಟ್ಟಡ ನಿರ್ಮಾಣ ಸೇರಿದಂತೆ ಸಾಕಷ್ಟು ಸೌಕರ್ಯ ನೀಡುತ್ತಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಪ್ರೌಢ ಶಾಲೆಗಳಿಗೆ ಇ-ವಿದ್ಯಾ ಕಾರ್ಯಕ್ರಮದಡಿ ಸ್ಮಾರ್ಟ್ ತರಗತಿ ನಡೆಸಲು ಅಗತ್ಯ ಸಲಕರಣೆ ನೀಡಲಾಗುತ್ತಿದೆ. ಸಲಕರಣಗಳನ್ನು ಶಾಲೆಗಳಲ್ಲಿ ಸಮರ್ಪಕವಾಗಿ ಬಳಸಬೇಕು. ಇದಕ್ಕೆ ನುರಿತ ಶಿಕ್ಷಕರು ಅವಶ್ಯಕ. ಸ್ಮಾರ್ಟ್ ತರಗತಿಗಳಲ್ಲಿ ಪಠ್ಯ ಬೋಧನೆ ಜತೆಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.

ಅಂತರ ಸರಿದೂಗಿಸಿ: ‘ಡಿಜಿಟಲ್ ಸಾಕ್ಷರತೆ ವಿಷಯದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಮಕ್ಕಳ ನಡುವೆ ಅಂತರವಿದ್ದು, ಇದನ್ನು ಸರಿದೂಗಿಸಬೇಕು. ಶೇ 100ರಷ್ಟು ಅನಕ್ಷರತೆ ಹೋಗಲಾಡಿಸುವುದು ಒಂದು ಭಾಗವಾದರೆ ತಂತ್ರಜ್ಞಾನಕ್ಕೆ ತಕ್ಕಂತೆ ಡಿಜಿಟಲ್ ಸಾಕ್ಷರತೆ ಸಾಧನೆ ಮತ್ತೊಂದು ಭಾಗವಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

‘ನಾವು 21ನೇ ಶತಮಾನದಲ್ಲಿದ್ದೇವೆ. ಪ್ರಪಂಚದಲ್ಲಿ ಅನೇಕ ಬದಲಾವಣೆ ಆಗುತ್ತಿವೆ. ಇದರಲ್ಲಿ ತಂತ್ರಜ್ಞಾನ ಬಹುಮುಖ್ಯ ಪಾತ್ರ ವಹಿಸಿದೆ. ಮೊದಲು ಶಿಕ್ಷಕರು ಶಾಲೆಗಳಲ್ಲಿ ಹಾಗೂ ಪೋಷಕರು ಮನೆಯಲ್ಲಿ ಪಾಠ ಹೇಳಿ ಕೊಡುತ್ತಿದ್ದರು. ಸ್ಮಾರ್ಟ್ ಫೋನ್, ಸಾಮಾಜಿಕ ಜಾಲತಾಣ, ಇಂಟರ್ನೆಟ್ ಬಂದ ಮೇಲೆ ಮಾಹಿತಿ ಕೊರತೆ ಇಲ್ಲದಾಗಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಶಿಕ್ಷಕರು ಬೋಧನೆ ಕ್ರಮದಲ್ಲಿ ಮಾರ್ಪಾಟು ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ದೇಶದಲ್ಲಿ ಪ್ರತಿಯೊಬ್ಬರು ಕಂಪ್ಯೂಟರ್ ಮತ್ತು ಡಿಜಿಟಲ್ ತಂತ್ರಜ್ಞಾನ ಬಳಸಬೇಕು. ಕಂಪ್ಯೂಟರ್ ತರಬೇತಿಯಲ್ಲಿ ಪಟ್ಟಣ ಮತ್ತು ಹಳ್ಳಿ, ಖಾಸಗಿ ಮತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ನಡುವೆ ವ್ಯತ್ಯಾಸ ಹೋಗಲಾಡಿಸಲು ಕಂಪನಿಗಳು ಮುಂದೆ ಬರಬೇಕು’ ಎಂದು ಮನವಿ ಮಾಡಿದರು.

ಶಿಕ್ಷಣದಲ್ಲಿ ಸುಧಾರಣೆ: ಸ್ಮಾರ್ಟ್ ತರಗತಿ ಆರಂಭಿಸಲು ಪ್ರಾರಂಭಿಸಲು ಪ್ರತಿ ಸರ್ಕಾರಿ ಪ್ರೌಢ ಶಾಲೆಗೆ ತಲಾ ₹ 66 ಸಾವಿರ ಬೆಲೆ ಬಾಳುವ ಕಿಟ್ ನೀಡಲಾಗುವುದು. ಇದಕ್ಕೆ ವಿದ್ಯುತ್ ಅಗತ್ಯವಿಲ್ಲ. ಸೌರಶಕ್ತಿಯಿಂದಲೇ ಸಲಕರಣೆ ಬಳಕೆ ಮಾಡಬಹುದು. ಇದರಿಂದ ಶಿಕ್ಷಣದಲ್ಲಿ ಉತ್ತಮ ಸುಧಾರಣೆ ಕಾಣಲು ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘25 ದಿನದಲ್ಲಿ ಇ-ವಿದ್ಯಾ ಕಾರ್ಯಕ್ರಮವನ್ನು ಜಿಲ್ಲೆಯ 130 ಶಾಲೆಯಲ್ಲಿ ಅನುಷ್ಠಾನಗೊಳಿಸುತ್ತೇವೆ. ಮೊಬೈಲ್ ಮಾದರಿಯಲ್ಲೇ ಸ್ಮಾರ್ಟ್ ಕ್ಲಾಸ್ ಸಲಕರಣೆ ಉಪಯೋಗಿಸಬಹುದು. ಜತೆಗೆ ತರಗತಿಯಿಂದ ತರಗತಿಗೆ ತೆಗೆದುಕೊಂಡು ಹೋಗಬಹುದು. ಇದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಪ್ರೌಢ ಶಾಲೆಗೆ ಸಂಬಂಧಿಸಿದ ಗಣಿತ ಮತ್ತು ವಿಜ್ಞಾನ ವಿಷಯದ ಪಠ್ಯ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ’ ಎಂದು ರೋಟರಿ ಸಂಸ್ಥೆ ಸಲಹೆಗಾರ ಶ್ರೀಧರ್ ವಿವರಿಸಿದರು.

ರೋಟರಿ ಜಿಲ್ಲಾ ಗೌವರ್ನರ್ ಸಮೀರ್ ಹರಿಯಾನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ..ರತ್ನಯ್ಯ, ಶಿಕ್ಷಣ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.