ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ, ಪ್ರಿಯಾಂಕಾ ಹೋಬಳಿ ಮಟ್ಟಕ್ಕೆ ಇಳಿದಿದ್ದಾರೆ: ಕಟೀಲ್‌ ವ್ಯಂಗ್ಯ

Published 7 ಮೇ 2023, 15:28 IST
Last Updated 7 ಮೇ 2023, 15:28 IST
ಅಕ್ಷರ ಗಾತ್ರ

ಕೋಲಾರ: ‘ಪ್ರಧಾನಿಯಾಗಿದ್ದರೂ ನರೇಂದ್ರ ಮೋದಿ ನಮ್ಮ ಪಕ್ಷದ ನಾಯಕ. ಅವರೇನು ಗ್ರಾಮ ಪಂಚಾಯಿತಿ ಚುನಾವಣೆಗೆ ಬಂದಿಲ್ಲ. ರಾಜ್ಯದ ಭವಿಷ್ಯ ದೃಷ್ಟಿಯಿಂದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲ್ಲಿಸಲು ಬಂದಿದ್ದಾರೆ’ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಮರ್ಥಿಸಿಕೊಂಡರು.

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹೋಬಳಿ ಮಟ್ಟಕ್ಕೆ ಇಳಿದಿದ್ದಾರೆ. ಪ್ರಧಾನಿ ರೋಡ್‌ ಶೋ ಮಾಡಿದ್ದು ಬೆಂಗಳೂರಿನಲ್ಲಿ; ಹಳ್ಳಿಯಲ್ಲಿ ಅಲ್ಲ’ ಎಂದರು.

‘ಬೆಂಗಳೂರಿನಲ್ಲಿ ಎರಡು ದಿನ ನಡೆದ ರೋಡ್‌ ಶೋ ಕರ್ನಾಟಕ ಇತಿಹಾಸದಲ್ಲಿ ಹೊಸ ಪುಟ ತೆರೆದಿದೆ. ಯಾವ ಪ್ರಧಾನಿಯೂ ಇಷ್ಟು ದೊಡ್ಡ ರೋಡ್‌ ಶೋ ಮಾಡಲಿಲ್ಲ, ಇಷ್ಟೊಂದು ಜನ ಸೇರಿರಲಿಲ್ಲ. ಇದರಿಂದ ಕಾಂಗ್ರೆಸ್‌ ಭಯಭೀತವಾಗಿದೆ, ಮಾನಸಿಕವಾಗಿ ಕುಗ್ಗಿದೆ’ ಎಂದು ಹೇಳಿದರು.

ರಾಜ್ಯದ ಬಿಜೆಪಿ ನಾಯಕರ ಮುಖ ತೋರಿಸಲು ಸಾಧ್ಯವಾಗದೆ ಪದೇಪದೇ ಮೋದಿ ಕರೆಸುತ್ತಿದ್ದಾರೆ ಎಂಬ ಕಾಂಗ್ರೆಸ್‌ ಟೀಕೆಗೆ ಪ್ರತಿಕ್ರಿಯಿಸಿ, ‘ಹಾಗಾದರೆ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಮುಖ ತೋರಿಸಲು ಸಾಧ್ಯವಾಗದೆ ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಕರೆ ತರುತ್ತಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಈ ಬಾರಿ ವರುಣಾದಲ್ಲಿ ಸೋಲುವುದು ಖಚಿತ.‌ ಡಿ.ಕೆ.ಶಿವಕುಮಾರ್‌ ಅವರಿಗೂ ಸೋಲಿನ ಭಯ ಕಾಡುತ್ತಿದೆ‌. ಮುಖ್ಯಮಂತ್ರಿ ಸ್ಥಾನ ಹೋಗಲಿ, ಗೆದ್ದರೆ ಸಾಕು ಎಂಬಂಥ ಸನ್ನಿವೇಶದಲ್ಲಿ ಇದ್ದಾರೆ’ ಎಂದು ಹೇಳಿದರು.

ಬಿಜೆಪಿ–ಜೆಡಿಎಸ್‌ ಮೈತ್ರಿ ಸಂಬಂಧ ಕೆಲ ಬಿಜೆಪಿ ಶಾಸಕರೇ ಕೆಲವೆಡೆ ಹೇಳಿಕೆ ನೀಡಿರುವ ಕುರಿತು, ‘ಯಾವ ಭಾವನೆಯಲ್ಲಿ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನಾನು ಪಕ್ಷದ ನಾಯಕ. ರಾಜ್ಯ ಪ್ರವಾಸ ಮಾಡಿದ್ದು, ಸಮ್ಮಿಶ್ರ ಸರ್ಕಾರ ಬರಲ್ಲ. ಬಿಜೆಪಿ ಬಹುಮತದ ಸರ್ಕಾರ ರಚಿಸಲಿದೆ ಬರೆದಿಟ್ಟುಕೊಳ್ಳಿ’ ಎಂದರು.

‘ಜಗದೀಶ ಶೆಟ್ಟರ್‌, ಲಕ್ಷ್ಮಣ ಸವದಿ ಬಿಜೆಪಿ ತೊರೆದಿರುವುದರಿಂದ ಯಾವುದೇ ನಷ್ಟ ಇಲ್ಲ. ಅವರಿಗೆ ಎಲ್ಲಾ ಅವಕಾಶವನ್ನು ಪಕ್ಷ ಕಲ್ಪಿಸಿತ್ತು. ಅಧಿಕಾರ ದಾಹದಿಂದ ಪಕ್ಷ ತೊರೆದಿದ್ದಾರೆ ಎಂಬುದು ಜನರಿಗೆ ಗೊತ್ತಿದೆ’ ಎಂದು ಹೇಳಿದರು.

ಹಣ ನೀಡಿ ಸಮೀಕ್ಷೆ ಮಾಡಿಸಲಾಗುತ್ತಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ, ‘ಕುಮಾರಸ್ವಾಮಿ ಅವರೂ ಮಾಡಿಸಲಿ, ಯಾರು ಬೇಡವೆಂದಿದ್ದು? ಹಣ ಕೊಟ್ಟು ಸಮೀಕ್ಷೆ ಮಾಡಿಸುವುದಾದರೆ ಟಿ.ವಿಗಳ ಮೇಲೆ ಆರೋಪ ಮಾಡಿದಂತೆ. ನಮ್ಮ ಮೇಲೆ ಸಂಶಯ ಅಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT