ಮುಳಬಾಗಿಲು: ಕೊರೊನಾ ಸಂಕಷ್ಟದಲ್ಲೂ ಕೋಚಿಮುಲ್ ತನ್ನ ಉತ್ಪನ್ನಗಳ ಗುಣಮಟ್ಟ ಕಾಪಾಡಿಕೊಂಡು ಬರುತ್ತಿದೆ. ತುಪ್ಪವನ್ನು ತಿರುಪತಿ, ತಿರುಮಲೆಗೂ ಪೂರೈಸಲಾಗುತ್ತಿದೆ. ಗುಣಮಟ್ಟದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ತಿಳಿಸಿದರು.

ನಗರದ ರಾಜ್ಯ ಸಾರಿಗೆ ನಿಲ್ದಾಣದ ಬಳಿ ಗುರುವಾರ ಕೋಚಿಮುಲ್ ಮಾರಾಟ ಮಳಿಗೆ ಪ್ರಾರಂಭಿಸಿ ಅವರು ಮಾತನಾಡಿದರು.

ನಗರ ಪ್ರದೇಶದಲ್ಲಿ ಇದು ಹತ್ತನೇ ಮಾರಾಟ ಮಳಿಗೆಯಾಗಿದೆ. ನಿರುದ್ಯೋಗಿ ಯುವಕರು ಮುಂದೆ ಬಂದಲ್ಲಿ ಮಳಿಗೆ ತೆಗೆಯಲು ಅವಕಾಶ ನೀಡಲಾಗುವುದು. ಕೋಚಿಮುಲ್ ತನ್ನ ಉತ್ಪನ್ನಗಳ ಬೆಲೆಯನ್ನು ಬುಧವಾರದಿಂದ ಕಡಿಮೆ ಮಾಡಿದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮಮಟ್ಟದ ಎಲ್ಲಾ ಉತ್ಪನ್ನಗಳು ಸುಲಭ ಬೆಲೆಯಲ್ಲಿ ಸಿಗಬೇಕೆಂಬುದು ಮುಖ್ಯ ಉದ್ದೇಶವಾಗಿದೆ ಎಂದರು.

ಲಾಭ, ನಷ್ಟ ಸರಿತೂಗಿಸಲು ಅನಿವಾರ್ಯವಾಗಿ ಹಾಲು ಉತ್ಪಾದಕ ರಿಂದ ಖರೀದಿಸುವ ಹಾಲಿನ ಒಂದು ಲೀಟರ್ ಬೆಲೆಯನ್ನು ಒಂದೂವರೆ ರೂಪಾಯಿಗೆ ಇಳಿಸಲಾಗಿದೆ ಎಂದರು.

ನಗರಸಭೆ ಅಧ್ಯಕ್ಷ ರಿಯಾಜ್ ಅಹಮದ್, ಸದಸ್ಯ ಮಂಡಿಕಲ್ ರಾಜಣ್ಣ, ಜೆಡಿಎಸ್ ಮುಖಂಡ ಅಲಂಗೂರು ಶಿವಣ್ಣ, ತಾ.ಪಂ. ಮಾಜಿ ಅಧ್ಯಕ್ಷ ರಘುಪತಿ ರೆಡ್ಡಿ, ಜೆಡಿಎಸ್ ಮುಖಂಡ ಗ್ಯಾಸ್ ಶ್ರೀಧರ್, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ತಿಪ್ಪಾರೆಡ್ಡಿ, ಸುನೀಲ್‌ನಾದ್, ಕೋಚಿಮುಲ್ ಮಾರುಕಟ್ಟೆ ವಿಭಾಗದ ಲಕ್ಷ್ಮಿನಾರಾಯಣ, ರಾಜೀವ್, ನಂಜುಂಡಗೌಡ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.