ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಬಾಪುಲೆ ಮಹಿಳೆಯರ ಶಕ್ತಿ

Last Updated 3 ಜನವರಿ 2020, 12:33 IST
ಅಕ್ಷರ ಗಾತ್ರ

ಕೋಲಾರ: ‘ಜಿಡ್ಡುಗಟ್ಟಿದ ಜಾತಿ ವ್ಯವಸ್ಥೆಯೆ ಸಮಾಜವನ್ನು ತಪ್ಪು ದಾರಿಗೆ ತೆಗೆದುಕೊಂಡು ಹೋಗುತ್ತಿದೆ’ ಎಂದು ಉಪ ನಿವಿಭಾಗಾಧಿಕಾರಿ ಸೋಮಶೇಖರ್ ಕಳವಳ ವ್ಯಕ್ತಪಡಿಸಿದರು.

ನಗರದ ಎಸ್‌ಎನ್‌ಆರ್‌ ಪ್ಯಾರಮೆಡಿಕಲ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಜ್ಯೋತಿಬಾಪುಲೆ ಜಯಂತಿ ಉದ್ಘಾಟಿಸಿ ಮಾತನಾಡಿ, ‘ಜ್ಯೋತಿಬಾಪುಲೆ ಹೆಣ್ಣು ಮಕ್ಕಳ ಶಕ್ತಿಯಾಗಿ ಹೋರಾಟ ನಡೆಸಿದ ಹಿನ್ನಲೆಯಿಂದಲೆ ಮಹಿಳೆಯರಿಗೂ ಸಮಾನ ಹಕ್ಕು ದೊರೆತಿದೆ’ ಎಂದು ಅಭಿಪ್ರಾಯಪಟ್ಟರು.

‘ಹಿಂದಿನ ಕಾಲಕ್ಕೂ, ಈಗಿನ ಕಾಲಕ್ಕೂ ಬಹಳಷ್ಟು ವ್ಯಾತ್ಯಾಸಗಳಿವೆ. ಅನೇಕ ಮಹಿಳೆಯರ ಹೋರಾಟದ ಫಲವಾಗಿ ಮಹಿಳೆಯರು ಸಮಾಜದಲ್ಲಿ ಜೀವಿಸುವ ಹಕ್ಕು ಸಿಕ್ಕಿದೆ. ಬಾಪುಲೆ ಶಿಕ್ಷಣ ಕ್ಷೇತ್ರದ ಜತೆಗೆ ಮಹಿಳಾ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ’ ತಿಳಿಸಿದರು.

‘ಹಿಂದೆ ದುರ್ಬಲ ವರ್ಗದ ಮಹಿಳೆಯರು ಶಿಕ್ಷಣ ಪಡೆದುಕೊಳ್ಳಲು ಅವಕಾಶ ಇರಲಿಲ್ಲ. ಅದು ಕೇವಲ ಸ್ಥಿತವಂತರ ಸ್ವತ್ತಾಗಿತ್ತು. ಆಗಿನಿಂದ ಹಂತಹಂತವಾಗಿ ಬದಲಾದ ಪರಿಸ್ಥಿತಿಯಿಂದಲೆ ಹೆಣ್ಣು ವಿದ್ಯೆ ಕಲಿತರೆ ಸಮಾಜ ಸುಧಾರಣೆಯಾಗುತ್ತದೆ ಎಂಬುದನ್ನು ಅರಿತವರು ಹೋರಾಟ ನಡೆಸಿದರು’ ಎಂದರು.

‘ಹಿಂದೆ ಹಣ್ಣಿಗೆ ಜೀವಸುವ ಹಕ್ಕು ಸಹ ಇರಲಿಲ್ಲ. ಆಕಸ್ಮಿಕವಾಗಿ ಗಂಡ ಮೃತಪಟ್ಟರೆ ಅದೇ ಚಿತೆಯ ಮೇಲೆ ಪ್ರಾಣ ಬಿಡಬೇಕಿತ್ತು, ಇದಕ್ಕೆ ಸತಿ ಸಹಗಮಾನ ಪದ್ದತಿಯೇ ಮೂಲಕ ಕಾರಣವಾಗಿತ್ತು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ಕಲ್ಪಿಸಿದಾಗ ಮಾತ್ರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿ ಜ್ಯೋತಿಬಾಲೆ ಪುಲೆ ಉದ್ದೇಶವಾಗಿತ್ತು’ ಎಂದು ಹೇಳಿದರು.

‘ಹೆಣ್ಣು ಮಕ್ಕಳು ಶಾಲೆಗೆ ಹೋಗುವುದು ಬಹಳ ಕ್ರಾಂತಿಕಾರಿ ವಿಚಾರ. ಮಹಿಳೆಯರಿಗೆ ಶಿಕ್ಷಣ ಕಲ್ಪಿಸಿ, ಸ್ವವಲಾಂಬಿ ಬದುಕು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು, ಅವರಿಗೆ ಶಿಕ್ಷಣ ಕಲ್ಪಿಸಲು ಬಾಪುಲೆ ದೊಡ್ಡ ಕಾಂತ್ರಿಯನ್ನೆ ನಡೆಸಿದರು. ದೇಶದ ಮಹಿಳಾ ಪ್ರಥಮ ಶಿಕ್ಷಕಿ ಬಾಪುಲೆ, ಅವರ ಮಾರ್ಗದರ್ಶನದಲ್ಲಿ ಶಿಕ್ಷಕರು ಮಕ್ಕಳಿಗೆ ಬೋದನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಗೃಹ ಪ್ರವೇಶ ಸಮಿತಿ ಸಂಚಾಲಕ ಪ್ರೊ.ಶಿವಪ್ಪ ಅರಿವು, ಪ್ಯಾರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ವಿಜಯಮ್ಮ, ಬಹುಜನ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ನಾಗರಾಜ್, ಈ ನೆಲ ಈ ಜಲ ಸಾಂಸ್ಕೃತಿ ಕಲಾ ಸಂಘದ ಅಧ್ಯಕ್ಷ ವೆಂಕಟಾಚಲಪತಿ, ಕ್ಯಾನ್ ಸಂಸ್ಥೆಯ ಮುಖ್ಯಸ್ಥೆ ಮಲ್ಲಮ್ಮ, ಕಲಾವಿದೆ ಶಾಂತಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT