ತರಹೇವಾರಿ ಬಣ್ಣಗಳ ಗುಲಾಬಿ ಹೂವು ಮಾರಾಟಕ್ಕೆ ಸಾಗಿಸಲು ಸಿದ್ಧತೆ
ಗುಲಾಬಿ ಹೂವು ವಿಂಗಡಿಸುತ್ತಿರುವುದು
28 ಎಕರೆಯಲ್ಲಿ ದಂಪತಿಯಿಂದ ಗುಲಾಬಿ ಕೃಷಿ ಅಂತರರಾಷ್ಟ್ರೀಯು ಮಾರುಕಟ್ಟೆಯಲ್ಲಿ ಒಂದು ಗುಲಾಬಿಗೆ ₹ 18 ದರ ತಾಜ್‌ಮಹಲ್ ತಳಿಯ ಚೆಂದದ ಗುಲಾಬಿಗೂ ಬೇಡಿಕೆ
ವ್ಯಾಲೆಂಟೈನ್ಸ್ ಡೇ ಕಾರಣ ಗುಲಾಬಿ ಹೂವಿಗೆ ಬೇಡಿಕೆ ಹೆಚ್ಚಿದೆ. ರಾಷ್ಟ್ರೀಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಪ್ರೇಮಿಗಳು ನಾವು ಬೆಳೆಯುವ ಗುಲಾಬಿ ಹೆಚ್ಚು ಇಷ್ಟಪಡುತ್ತಾರೆ
ಪವನ್ ಕುಮಾರ್ ಕೆ. ಗುಲಾಬಿ ಬೆಳೆಗಾರ ಕೋಲಾರ
ಈ ಗುಲಾಬಿಯೂ ನಿನಗಾಗಿ…
ಗುಲಾಬಿ ಹೂವಿನ ಮೇಲೆ ಹಲವಾರು ಕವಿಗಳು ಸಾಹಿತಿಗಳು ಹತ್ತಾರು ಹಾಡು ಬರೆದಿದ್ದಾರೆ. ಮುಳ್ಳಿನ ಗುಲಾಬಿ ಸಿನಿಮಾದ ‘ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ’ ಓಂ ಸಿನಿಮಾದ ‘ಓ ಗುಲಾಬಿಯೇ ಓಓ ಗುಲಾಬಿಯೇ ನಿನ್ನಂದ ಚೆಲುವಿಂದ ಸೆಳೆಯೋದೇ ಪ್ರೇಮವೇ’ ಆಟೊ ರಾಜ ಸಿನಿಮಾದ ‘ನಲಿವ ಗುಲಾಬಿ ಹೂವೇ ಮುಗಿಲ ಮೇಲೇರಿ ನಗುವೆ’ ಕಲಾವಿದ ಸಿನಿಮಾದ ‘ಹೂವಾ ರೋಜಾ ಹೂವಾ’ ನಾನು ನನ್ನ ಹೆಂಡತಿ ಸಿನಿಮಾದ ‘ಯಾರೇ ನೀನು ರೋಜಾ ಹೂವೇ...’ ಹೀಗೆ ಹಲವು ಹಾಡುಗಳ ಮೂಲಕ ಗುಲಾಬಿ ಹೂವಿನ ಬಣ್ಣನೆ ಮಾಡುತ್ತಾ ಪ್ರೇಮದ ಬಗ್ಗೆ ವಿವರಿಸಲಾಗಿದೆ. ಹಿಂದಿ ಇಂಗ್ಲಿಷ್ ಬೇರೆ ಬೇರೆ ಭಾಷೆಗಳಲ್ಲೂ ಹಾಡುಗಳು ಬಂದಿವೆ.