ಗಂಗಾವತಿ (ಕೊಪ್ಪಳ ಜಿಲ್ಲೆ): ಬಾಲಕನೊಬ್ಬ ಆಟೊ ಚಲಾಯಿಸುವಾಗ ಅಪಘಾತ ಮಾಡಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದಕ್ಕೆ ಆಟೊ ಮಾಲೀಕನಿಗೆ ₹1.41 ಕೋಟಿ ದಂಡ ವಿಧಿಸಿ ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

2021ರ ಮಾರ್ಚ್ 10ರಂದು ಯಲಬುರ್ಗಾದಲ್ಲಿ ಅಪಘಾತ ನಡೆದಿತ್ತು. ಯಲಬುರ್ಗಾದ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಗಂಗಾವತಿ ನಿವಾಸಿ ರಾಜಶೇಖರ ಪಾಟೀಲ್ ಅವರು ಮೃತಪಟ್ಟಿದ್ದರು. ಆಟೊ ಚಲಾಯಿಸುತ್ತಿದ್ದ 17 ವರ್ಷದ ಬಾಲಕನ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ದೂರು ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ ಎಸ್.ಗಾಣಿಗೇರ ಅವರು ಬಾಲಕನಿಗೆ ಆಟೊ ಚಲಾಯಿಸಲು ಕೊಟ್ಟಿದ್ದ ಮಾಲೀಕನಿಗೆ ದೊಡ್ಡ ಮೊತ್ತದ ದಂಡ ವಿಧಿಸಿದ್ದಾರೆ. ದಂಡದ ಮೊತ್ತವನ್ನು ರಾಜಶೇಖರ ಕುಟುಂಬಕ್ಕೆ ಪರಿಹವಾರವಾಗಿ ನೀಡುವಂತೆಯೂ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.