ಗಂಗಾವತಿ: ತಾಲ್ಲೂಕಿನ ಚಿಕ್ಕಜಂತಕಲ್ ಗ್ರಾಮದ ಮಾರೆಮ್ಮ ಗುಡಿ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ ಗ್ರಾಮೀಣ ಠಾಣೆ ಪೊಲೀಸರು, ಸುಮಾರು ₹2.80 ಲಕ್ಷ ಮೌಲ್ಯದ 5.20 ಕೆಜಿ ಗಾಂಜಾ, ₹40 ಸಾವಿರದ ಕಾರು ಭಾನುವಾರ ಜಪ್ತಿ ಮಾಡಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗುಂತಕಲ್ ತಾಲ್ಲೂಕಿನ ಧರ್ಮಾವರಂ ಗೇಟ್, ಪಾಂಡುರಂಗ ಟೆಂಪಲ್ ಬಳಿಯ ಗೋಪಾಲ ವಾಲ್ಮೀಕಿ, ಮಸ್ತಾನ ಹೊನ್ನುರ, ಶೇಖ್ ಮಹಿಬೂಬ, ಭಾಗ್ಯನಗರದ ಶೇಖರ ಚನ್ನಪ್ಪ ಬಂಧಿತರು.

ಆಂಧ್ರಪ್ರದೇಶದ ಮೂಲದ ಇವರು ಕಾರಿನಲ್ಲಿ ಕಂಪ್ಲಿ ತಾಲ್ಲೂಕು ಮಾರ್ಗವಾಗಿ ಚಿಕ್ಕಜಂತಕಲ್ ಗ್ರಾಮದ ಮೂಲಕ ಗಂಗಾವತಿಗೆ ಬಂದು ಗಾಂಜಾ ಮಾರಾಟ ಮಾಡುವ ಯೋಜನೆ ರೂಪಿಸಿದ್ದರು. ಕಾರಿನಲ್ಲಿ ನಾಲ್ವರು ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಾಹನವನ್ನು ತಡೆದು ಪರಿಶೀಲಿಸಿದಾಗ ಗಾಂಜಾ ಸಿಕ್ಕಿದೆ. ಆರೋಪಿಗಳನ್ನು ಬಂಧಿಸಿ, ಗಾಂಜಾ ಮತ್ತು ಕಾರು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮೀಣ ಠಾಣೆ ಪಿಎಸ್ಐ ವೆಂಕಟೇಶ ಚವ್ಹಾಣ್ ಸೇರಿ ತಂಡ ಕಾರ್ಯಾಚರಣೆಯಲ್ಲಿ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.