ಯಲಬುರ್ಗಾ: ಅಧುನಿಕತೆಯಿಂದಾಗಿ ಎತ್ತುಗಳ ಸಾಕಾಣಿಕೆ ಕಡಿಮೆಯಾಗಿದೆ. ಬಾಡಿಗೆ ಎತ್ತುಗಳಿಗೆ ಸಮಯಕ್ಕೆ ಸಿಗುವುದಿಲ್ಲ. ಸಿಕ್ಕರೂ ದುಬಾರಿ. ಹೀಗಾಗಿ ತಾಲ್ಲೂಕಿನ ಗೆದಗೇರಿ ತಾಂಡಾದ ಹೊರವಲಯದಲ್ಲಿ ದಂಪತಿಯೇ, ಎತ್ತುಗಳಾಗಿ ತಾವೇ ಹೆಗಲು ತಮ್ಮ ಹೊಲದಲ್ಲಿನ ಕೃಷಿ ಚಟುವಟಿಕೆಯನ್ನು ನಿರ್ವಹಿಸಿದರು.

‘ನಾಲ್ಕು ಎಕರೆ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಸುವುದು ಸಾಹಸದ ಕೆಲಸವಾಗಿದೆ. ಆದಾಯಕ್ಕಿಂತಲೂ ಕೃಷಿ ಕೆಲಸಕ್ಕೆ ಮಾಡುವ ಖರ್ಚು ಹೆಚ್ಚಾಗುತ್ತಿದೆ. ಎತ್ತು ಮತ್ತು ಕೃಷಿ ಪರಿಕರ ಇರುವವರು ತಮ್ಮ ಜಮೀನಿನ ಕೆಲಸ ಮುಗಿದ ನಂತರ ನಮ್ಮ ಹೊಲದ ಕೆಲಸಕ್ಕೆ ಬರುತ್ತಾರೆ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಕೃಷಿ ಕೆಲಸವಾಗುವುದಿಲ್ಲ. ಉತ್ತಮ ಇಳುವರಿ ಸಿಗುವುದಿಲ್ಲ. ದುಬಾರಿ ದರ ನಿಗದಿಪಡಿಸುತ್ತಾರೆ. ಹೀಗೆ ಆದಾಯಕ್ಕಿಂತಲೂ ಖರ್ಚು ಹೆಚ್ಚಾಗುವುದನ್ನು ಗಮನಿಸಿಯೇ ಜಾನುವಾರು ಬದಲಿಗೆ ಸ್ವತಃ ರೈತರೇ ಕೆಲಸದಲ್ಲಿ ತೊಡಗಬೇಕಾಗಿದೆ ಎಂದು ಪರಸಪ್ಪ ಚವ್ಹಾಣ ತಿಳಿಸಿದ್ದಾರೆ.

‘ಎಡೆ ಹೊಡೆಯಲು ದೊಡ್ಡ ಕೆಲಸವಾಗಿವುದಿಲ್ಲ. ಅದಕ್ಕೂ ದೊಡ್ಡ ಬಾಡಿಗೆ ನಿಗದಿಯಾಗಿದೆ. ಅದಕ್ಕಾಗಿಯೇ ಪತಿಯೊಂದಿಗೆ ನಾನು ಸೇರಿ ಎಡಿಹೊಡೆದಿದ್ದೇವೆ. ನಿತ್ಯ ಕೃಷಿ ಕೆಲಸದಲ್ಲಿಯೇ ನಿರತರಾಗಿರುತ್ತೇವೆ. ದುಬಾರಿಕಾಲದಲ್ಲಿ ಅನಿವಾರ್ಯವಾಗಿದೆ’ ಎಂದು ಕೃಷಿ ಮಹಿಳೆ ಜುಮ್ಮವ್ವ ಪರಿಸಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.