ಕುಷ್ಟಗಿ: ಕುಷ್ಟಗಿ, ನಿಡಶೇಸಿ, ಗೆಜ್ಜೆಬಾವಿ, ಪಶ್ಚಕಂತಿ ಹಿರೇಮಠದ ಚೆನ್ನಬಸವ ಶಿವಾಚಾರ್ಯ ಸ್ವಾಮೀಜಿ ಹಾಗೂ ಅಭಿನವ ಕರಿಬಸವ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಪಟ್ಟಣದ ಕಲ್ಮಠದ ಜಾತ್ರಾ ಮಹೋತ್ಸವ ನಿಮಿತ್ತ ಅಂಗವಾಗಿ ಭಕ್ತರಿಂದ ಸಂಭ್ರಮದೊಂದಿಗೆ ಭಾನುವಾರ ಬೆಳಿಗ್ಗೆ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸಂಜೆ ಲಘುರಥೋತ್ಸವ ನಡೆಯಿತು.

ಬೆಳಿಗ್ಗೆ ಕಲ್ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶ್ವಾರಾಧ್ಯ ಮೂರ್ತಿಗೆ ಏಕಾದಶಿ ರುದ್ರಾಭಿಷೇಕ ಹಾಗೂ ಚೌಡೇಶ್ವರಿ ಮೂರ್ತಿಗೆ ಸಹಸ್ರ ಬಿಲ್ವಾರ್ಚನೆ, ಪುಷ್ಪಾರ್ಚನೆ, ಕುಂಕುಮಾರ್ಚನೆ, ಉಭಯ ದೇವರುಗಳಿಗೆ ಸಹಸ್ರ ಬಿಲ್ವಾರ್ಚನೆ ಮಂಗಳಾರತಿ, ನೈವೇದ್ಯ ಜರುಗಿದವು. ಮಠದಿಂದ ಆರಂಭಗೊಂಡ ಭಕ್ತರ ಸಡಗರದ ಅಡ್ಡಪಲ್ಲಕ್ಕಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವಿವಿಧ ಕಲಾತಂಡಗಳು, ಸಕಲ ವಾದ್ಯ ವಾದನದ ವೈಭವ ಗಮನ ಸೆಳೆಯಿತು. ಮುಸ್ಲಿಂ ಸಮಾಜದ ಹಿರಿಯರು ಮಹೋತ್ಸವದಲ್ಲಿ ಭಾಗವಹಿಸಿ ಶುಭಕೋರಿದರು. ನಂತರ ಮಠದಲ್ಲಿ ನಡೆದ ಅನ್ನ ಸಂತರ್ಪಣೆಯಲ್ಲಿ ಭಕ್ತರು ಪ್ರಸಾದ ಸೇವಿಸಿದರು.

ಸಂಜೆ ನಡೆದ ಲಘುರಥೋತ್ಸವಕ್ಕೆ ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಚಾಲನೆ ನೀಡಲಾಯಿತು. ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು, ಮುಖಂಡರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹಾಗೂ ನವದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ಯುವಜೋಡಿಗಳು ಲಘುರಥೋತ್ಸವ ಕಣ್ತುಂಬಿಕೊಂಡರು. ನಂತರ ಕಲ್ಮಠದಲ್ಲಿ ಹತ್ತುದಿನಗಳ ಕಾಲ ನಡೆದ ಪುರಾಣ ಪ್ರವಚನ ಇಂದು ಮಂಗಲಗೊಂಡಿತು.

ಚೆನ್ನಬಸವ ಶಿವಾಚಾರ್ಯ ಸ್ವಾಮೀಜಿ, ಮದ್ದಾನಿ ಹಿರೇಮಠದ ಕರಿಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಭಿನವ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಶಾಸಕ ದೊಡ್ಡನಗೌಡ ಎಚ್. ಪಾಟೀಲ್, ಯುವಮುಖಂಡ ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪುರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.