ಕಾರಟಗಿ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ವಾರ್ಷಿಕ ಮಹಾಸಭೆ ಹಾಗೂ ವಿಶೇಷ ಕಾರ್ಯಾಗಾರ ನವೆಂಬರ್ 22ರಂದು ಮಧ್ಯಾಹ್ನ 1ಗಂಟೆಗೆ ಪಟ್ಟಣದ ಸಿ. ಮಲ್ಲಿಕಾರ್ಜುನ ನಾಗಪ್ಪ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ ನಾಯಕ ತೊಂಡಿಹಾಳ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮಾಹಿತಿ ಹಕ್ಕು ಮತ್ತು ಕರ್ನಾಟಕ ನಾಗರಿಕ ಸೇವಾ ನಿಯಮಗಳು ಕುರಿತು ವಿಶೇಷ ಕಾರ್ಯಾಗಾರ ನಡೆಯಲಿದೆ. ವಿಶೇಷ ಉಪನ್ಯಾಸಕರಾಗಿ ಬಳ್ಳಾರಿಯ ನಿವೃತ್ತ ಜಿಲ್ಲಾ ಖಜಾನೆ ಅಧಿಕಾರಿಗಳೂ ಆದ ಜಿಲ್ಲಾ ತರಬೇತಿ ಸಂಸ್ಥೆಯ ತರಬೇತಿದಾರ ಕೆ.ಎಸ್.ಎ ಶ್ರೀಹರಿ ಆಗಮಿಸುವರು. ಅವರು ಕರ್ನಾಟಕ ಸೇವಾ ನಿಯಮಗಳು, ಮಾಹಿತಿ ಹಕ್ಕು, ಪಿಂಚಣಿ, ಎನ್ಪಿಎಸ್ ಸಹಿತ ನೌಕರರು ಅನುಭವಿಸುವ ಅನೇಕ ಸಮಸ್ಯೆಗಳು, ಸವಾಲುಗಳು, ಅವಕ್ಕೆ ಪರಿಹಾರ, ಸಲಹೆ, ಸೂಚನೆಗಳನ್ನು ಕೊಡುವರು’ ಎಂದರು.

ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕೋಬ ಚಲುವಾದಿ, ರಾಜ್ಯ ಪರಿಷತ್ ಸದಸ್ಯ ಮಂಜುನಾಥಸ್ವಾಮಿ ಹಿರೇಮಠ, ಉಪಾಧ್ಯಕ್ಷ ಗುರುಪ್ರಸಾದ ಚನ್ನಳ್ಳಿ, ಕ್ರೀಡಾ ಕಾರ್ಯದರ್ಶಿ ಶಿವಶಂಕರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.