ಬುಧವಾರ, ಜೂನ್ 16, 2021
28 °C

‘ಬಸವಣ್ಣ ಪ್ರಜಾಪ್ರಭುತ್ವದ ಸ್ಥಾಪಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ‘ಸರ್ವರೂ ಸಮಾನರು ಎನ್ನುವ ಕಲ್ಪನೆಯಿಂದ ಅನುಭವ ಮಂಟಪ ನಿರ್ಮಿಸಿದ್ದ ಬಸವಣ್ಣನವರು ವಿಶ್ವದ ಪ್ರಜಾಪ್ರಭುತ್ವದ ಸಂಸ್ಥಾಪಕರು’ ಎಂದು ಶಾಸಕ ಪರಣ್ಣ ಮುನವಳ್ಳಿ ಅಭಿಪ್ರಾಯಪಟ್ಟರು.

ಬಸವ ಜಯಂತಿ ಪ್ರಯುಕ್ತ ಶುಕ್ರವಾರ ನಗರದ ಆನೆಗೊಂದಿ ರಸ್ತೆಯಲ್ಲಿರುವ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ವಿಶ್ವಗುರು ಬಸವಣ್ಣನವರ ತತ್ವಗಳು 21ನೇ ಶತಮಾನದಲ್ಲೂ ವಿಶ್ವಕ್ಕೆ ಮಾದರಿಯಾಗಿವೆ. ಕೇವಲ ವಚನಗಳಿಂದ ಅಷ್ಟೇ ಅಲ್ಲದೆ ಜೀವ ಸಂಕುಲದ ಒಳಿತಿಗಾಗಿ ಅವರು ನೀಡಿದ ಆದರ್ಶ, ತತ್ವಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಮುಂದಿನ ಪೀಳಿಗೆಗೆ ಅವುಗಳನ್ನು ದಾಟಿಸುವ ಕೆಲಸ ಮಾಡಬೇಕು ಎಂದರು.

ಪ್ರಮುಖರಾದ ನಿಜಲಿಂಗಪ್ಪ ಮೆಣಸಿಗಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ, ದಿಲೀಪ್ ಕುಮಾರ, ನಾಗರಾಜ, ವೀರೇಶ, ಎ.ಕೆ. ಮಹೇಶ, ರಾಜಶೇಖರ ವೈಜಾಪೂರ, ಸಂಗಮೇಶ, ಶ್ರೀನಿವಾಸ್ ಹಾಗೂ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.