ಸೋಮವಾರ, ಮಾರ್ಚ್ 27, 2023
29 °C

ಸಹಕಾರ ಸಂಘಕ್ಕೆ ₹ 1.24 ಲಕ್ಷ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೋಟಿಹಾಳ (ಕುಷ್ಟಗಿ): ತಾಲ್ಲೂಕಿನ ದೋಟಿಹಾಳ ಗ್ರಾಮದ ಗಜಾನನ ಗ್ರಾಹಕರ ಸಹಕಾರ ಸಂಘದ 58ನೇ ವಾರ್ಷಿಕ ಮಹಾಸಭೆ ನಡೆಯಿತು.

2020-21ನೇ ಸಾಲಿನ ವರದಿ ಮಂಡಿಸಿದ ಸಂಘದ ಕಾರ್ಯದರ್ಶಿ ಈಶ್ವರಸ್ವಾಮಿ ದೇವಾಂಗಮಠ, ಸಂಘದಲ್ಲಿ 174 ಸದಸ್ಯರಿದ್ದು ₹ 20,098 ಷೇರು ಹಣ, ಸರ್ಕಾರದ ₹ 23,000 ಪಾಲು ಧನ ಹಾಗೂ ₹ 12,500 ಸಹಾಯಧನ ಇರುತ್ತದೆ ಎಂದು ವಿವರಿಸಿದರು.

ಸಂಘದ ಮೂಲಕ ಸಾರ್ವಜನಿಕರಿಗೆ ಪಡಿತರ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದು ಪ್ರಸಕ್ತ ವರ್ಷ ₹ 1,57,493 ಲಕ್ಷ ಮೊತ್ತದ ಆಹಾರಧಾನ್ಯ ಖರೀದಿಸಲಾಗಿದ್ದು ಅದರಲ್ಲಿ ₹ 1,63,870 ಲಕ್ಷ ಮೊತ್ತದ ಪಡಿತರ ಆಹಾರಧಾನ್ಯವನ್ನು ಮಾರಾಟ ಮಾಡಲಾಗಿದೆ. ಇದರಿಂದ ₹ 41,381 ವ್ಯವಹಾರಿಕ ಲಾಭವಾಗಿದ್ದು ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು ₹ 1,24,489 ಲಕ್ಷ ನಿವ್ವಳ ಲಾಭವಾಗಿದೆ ಎಂದು ಹೇಳಿದರು.

ಅಧ್ಯಕ್ಷ ಪಂಪಾಪತಿ ಅರಳಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಮಾಳಗಿ, ಮಲ್ಲಪ್ಪ ಮೇದಿಕೇರಿ, ಶ್ರೀನಿವಾಸ ಕಂಟ್ಲಿ, ವೆಂಕಟೇಶ ರಾಯಚೂರ, ವಿರುಪಾಕ್ಷಪ್ಪ ಪತ್ತಾರ, ಅಕ್ಬರಸಾಬ್ ತಾವರಗೇರಾ, ಹಿರೆಣ್ಯಪ್ಪ ಸಕ್ರಿ ಹಾಗೂ ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಷೇರುದಾರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.