ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಟಗಿ: ಸಂಭ್ರಮದ ಈಶ್ವರ ಕಾರ್ತಿಕೋತ್ಸವ

Published 17 ಡಿಸೆಂಬರ್ 2023, 16:11 IST
Last Updated 17 ಡಿಸೆಂಬರ್ 2023, 16:11 IST
ಅಕ್ಷರ ಗಾತ್ರ

ಕಾರಟಗಿ: ಪಟ್ಟಣದ ಪುರಾತನ ದೇವಾಲಯವಾದ ಈಶ್ವರ ದೇವಾಲಯದಲ್ಲಿ ಕಾರ್ತಿಕೋತ್ಸವ ಕಾರ್ಯಕ್ರಮ ಶ್ರದ್ದಾ, ಭಕ್ತಿಯೊಂದಿಗೆ ವೈಭವದಿಂದ ಭಾನುವಾರ ನಡೆಯಿತು.

ಬೆಳಿಗ್ಗೆ ದೇವಾಲಯದಲ್ಲಿ ವಿಶೇಷ ಪೂಜೆ, ಅರ್ಚನೆ, ಅಭಿಷೇಕ, ಅಲಂಕಾರ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಧಾನ ಅರ್ಚಕ ಅಭಿಷೇಕ ಹಿರೇಮಠ ನೇತೃತ್ವದಲ್ಲಿ ನಡೆದವು.

ಭಕ್ತರು ಕುಟುಂಬ ಪರಿವಾರದೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿ, ಭಕ್ತಿಯನ್ನು ಸಮರ್ಪಿಸಿ ಧನ್ಯತಾಭಾವ ಮೆರೆದರು.

ಹಿರೇಮಠದ ಮರುಳಸಿದ್ದಯ್ಯಸ್ವಾಮಿ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು. ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ದೀಪ ಬೆಳಗಿಸಿ ಕೃತಾರ್ಥರಾದರು.

ದೇವಸ್ಥಾನ ಸಮಿತಿಯ ನೀಲಪ್ಪ, ಪಂಪಯ್ಯಸ್ವಾಮಿ ಚಳ್ಳೂರ, ರಾಜಶೇಖರ ಸುಂಕದ, ರಾಕೇಶ್ ಕಂಚಿ, ಬಸನಗೌಡ ಬಳೂಟಿಗಿ, ಶಿವಕುಮಾರ ಸುಂಕದ, ಮಾರ್ಕಂಡೇಶಪ್ಪ ಮಾವಿನಮಡಗು, ರಾಘವೇಂದ್ರ ಶೆಟ್ಟಿ, ಕೋಟಗಿ ಮಲ್ಲಪ್ಪ, ಚನ್ನಪ್ಪ ಕಂಚಿ, ಈರಣ್ಣ ಹಚ್ಚಳ್ಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT