ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಜಿಕ್ ನಂಬರ್‌ಗೆ ತೀವ್ರ ಪೈಪೋಟಿ

ನಗರಸಭೆಯ ಚುಕ್ಕಾಣಿ ಹಿಡಿಯಲು ಬಿರುಸುಗೊಂಡ ರಾಜಕೀಯ ಚಟುವಟಿಕೆ
Last Updated 11 ಅಕ್ಟೋಬರ್ 2020, 5:30 IST
ಅಕ್ಷರ ಗಾತ್ರ

ಗಂಗಾವತಿ: ಇಲ್ಲಿನ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಉಭಯ ಪಕ್ಷಗಳಲ್ಲಿ ಮ್ಯಾಜಿಕ್ ನಂಬರ್‌ಗಾಗಿ ಕಾರ್ಯಾಚರಣೆ ಚುರುಕುಗೊಂಡಿದೆ.

ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅನುದಾನವನ್ನು ಹೊಂದಿರುವ ನಗರಸಭೆಯಾದ ಗಂಗಾವತಿಯಲ್ಲಿ 35 ವಾರ್ಡ್‌ಗಳಿವೆ. ಅದರಲ್ಲಿ 17 ಕಾಂಗ್ರೆಸ್, 14 ಬಿಜೆಪಿ, 2 ಜೆಡಿಎಸ್ ಮತ್ತು 2 ಪಕ್ಷೇತರ ಸದಸ್ಯರು ಚುನಾಯಿತರಾಗಿದ್ದಾರೆ. ಆದರೆ, ನಗರಸಭೆಯ ಅಧಿಕಾರದ ಗದ್ದುಗೆ ಏರಲು ಮ್ಯಾಜಿಕ್‌ ನಂಬರ್‌ 18 ಬೇಕಾಗಿದ್ದು, ಅಧ್ಯಕ್ಷ ಸ್ಥಾನ ಬಿಸಿಬಿ ಮಹಿಳೆ ಮತ್ತು ಉಪಾಧ್ಯಕ್ಷ
ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಈ ಹಿನ್ನೆಲೆಯಲ್ಲಿ ಉಭಯ ಪಕ್ಷಗಳಲ್ಲಿ ಇದೀಗ ನಗರಸಭೆಯ ಚುಕ್ಕಾಣಿ ಹಿಡಿಯಲು ಲೆಕ್ಕಾಚಾರವು ಶುರುವಾಗಿದೆ. ಪಕ್ಷೇತರ ಹಾಗೂ ಜೆಡಿಎಸ್‌ ಸದಸ್ಯರ ಬೆಂಬಲದ ಮೇಲೆ ಅಧಿಕಾರ ಯಾವ ಪಕ್ಷಕ್ಕೆ ಒಲಿಯಲಿದೆ ಎಂಬುದು ನಿರ್ಧಾರವಾಗಲಿದೆ.

ಪೈಪೋಟಿ: ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಬಿಸಿಬಿ ಒಬ್ಬರೇ ಮಹಿಳಾ ಸದಸ್ಯರಿದ್ದರಿಂದ 31ನೇ ವಾರ್ಡ್ ಸದಸ್ಯೆ ಮಾಲಾಶ್ರೀ ಅವರ ಹೆಸರು ಕೇಳಿಬಂದರೆ, ಬಿಜೆಪಿಯಲ್ಲಿ ಎರಡು ಹೆಸರುಗಳು ಕೇಳಿಬರುತ್ತಿವೆ. 3ನೇ ವಾರ್ಡ್‌ನ ಈರಮ್ಮ ಮತ್ತು 20ನೇ ವಾರ್ಡ್ ಜಯಶ್ರೀ ಸಿದ್ದಾಪುರ ನಡುವೆ ಪೈಪೋಟಿಯಿದೆ. ಸಮಾಧಾನಕ್ಕಾಗಿ ಅವಧಿ ಹಂಚಿಕೆಗೆ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಯಾವುದೇ ಗೊಂದಲವಿಲ್ಲ.

ಮ್ಯಾಜಿಕ್ ನಂಬರ್: ಕಾಂಗ್ರೆಸ್‌ಗೆ ಇಬ್ಬರ ಸದಸ್ಯರ ಬೆಂಬಲ ಬೇಕಿದ್ದು, ಈಗಾಗಲೇ ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರಿಬ್ಬರು ಕಾಂಗ್ರೆಸ್ ಪಾಳೆಯದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಇಬ್ಬರು ಸದಸ್ಯರಿಗೆ ಗಾಳ ಹಾಕಿದ್ದು, ಜಾತಿ ಲೆಕ್ಕಾಚಾರ ಕೈಗೂಡುವ ಸಾಧ್ಯತೆಗಳಿವೆ. ಬಿಜೆಪಿಗೆ ಐವರು ಸದಸ್ಯರ ಬೆಂಬಲ ಬೇಕಿದ್ದು, ಶಾಸಕರು ಮತ್ತು ಸಂಸದರು ಮತ ಚಲಾಯಿಸಿದರೂ ಮೂವರ ಬೆಂಬಲ ಬೇಕಾಗುತ್ತದೆ. ಇಬ್ಬರು ಪಕ್ಷೇತರರು ಮತ್ತು ಒಬ್ಬ ಜೆಡಿಎಸ್ ಸದಸ್ಯ ಬೆಂಬಲಿಸುವ ಭರವಸೆ ನೀಡಿದ್ದರೂ ಕೊನೆಯ ಗಳಿಗೆಯಲ್ಲಿ ಹೈಡ್ರಾಮ್ ನಡೆದರೂ ಅಚ್ಚರಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT