ಬುಧವಾರ, ಜನವರಿ 29, 2020
27 °C

ಸಹಕಾರಿ ಸಂಘ: ಅವಿರೋಧ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಕನೂರು: ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಿರ್ದೇಶಕರ ಅವಿರೋಧ ಆಯ್ಕೆ ಸೋಮವಾರ ಜರುಗಿತು.

ಸಂಘಕ್ಕೆ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ 12 ಸ್ಥಾನಕ್ಕೆ 14 ಜನ ನಾಮಪತ್ರ ಸಲ್ಲಿಕೆ ಮಾಡಿದ್ದರು. ಸೋಮವಾರ ನಾಮಪತ್ರ ಹಿಂಪಡೆಯುವ ದಿನ ಕೊನೆಯದಾಗಿದ್ದು, 14 ಜನರಲ್ಲಿ 02 ಜನ ನಾಮಪತ್ರ ಹಿಂಪಡೆದುಕೊಂಡ ಕಾರಣ 12 ಸ್ಥಾನಕ್ಕೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರ ಸ್ಥಾನಕ್ಕೆ ಅವಿರೋಧವಾಗಿ

ಹಾಲಪ್ಪ ಬಸಪ್ಪ ಆಚಾರ್, ರಾಮಣ್ಣ ಸಿದ್ದಪ್ಪ ಚನಪನಳ್ಳಿ, ಪ್ರಭುರಾಜ್ ಕಳಕನಗೌಡ ಪಾಟೀಲ್, ಬಸವರಾಜ ಶಿವಪ್ಪ ಬನ್ನಿಕೊಪ್ಪ, ಬಸಯ್ಯ ವೀರೇಶಯ್ಯ ಸಾಲಿಮಠ, ರಾಮಪ್ಪ ಭೀಮಪ್ಪ ಹಿರೇಮನಿ, ದೇವಪ್ಪ ಸಣ್ಣ ಹನುಮಪ್ಪ ಯಕ್ಲಾಸಪುರ, ಮರಿಹನುಮಪ್ಪ ಮುದುಕಪ್ಪ ದೇವರಮನಿ, ಮಲ್ಲಪ್ಪ ಭೀಮಪ್ಪ ಸುಳ್ಳದ, ವಿಜಯಲಕ್ಷ್ಮಿ ಕಳಕಪ್ಪ ದ್ಯಾಂಪುರ, ಗಂಗವ್ವ ನಾಗಪ್ಪ ಗುನ್ನಾಳ, ಬಸವರಾಜ ಅಂದಪ್ಪ ರಾಜೂರ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ರಾಮಣ್ಣ ತಳವಾರ ನಿರ್ದೇಶಕರ ಪಟ್ಟಿ ಘೋಷಣೆ ಮಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು