ಕುಷ್ಟಗಿ: ಪಟ್ಟಣದ ಸಂತೆ ಮೈದಾನದಲ್ಲಿರುವ ಎಲ್ಲ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ವಹಿಸಿಕೊಡುವ ಸಂದರ್ಭದಲ್ಲಿ ಸರ್ಕಾರದ ನಿಯಮಗಳ ಪ್ರಕಾರ ಹರಾಜು ಪ್ರಕ್ರಿಯೆ ಕಡ್ಡಾಯವಾಗಿ ನಡೆಸುವಂತೆ ಜಿಲ್ಲಾ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.

ಅನೇಕ ವಾಣಿಜ್ಯ ಮಳಿಗೆಗಳಲ್ಲಿ ಕೆಲ ವ್ಯಕ್ತಿಗಳು ಅನಧಿಕೃತವಾಗಿ ವ್ಯಾಪಾರ ವಹಿವಾಟು ನಡೆಸುತ್ತಿರುವುದು, ಬಹಿರಂಗ ಹರಾಜು ನಡೆಸದೆ 12 ವರ್ಷಗಳ ವರೆಗೆ ವ್ಯಾಪಾರಿಗಳಿಗೆ ಬಾಡಿಗೆ ನೀಡುವ ಒಪ್ಪಂದ ಮಾಡಿಕೊಂಡಂತೆ ನಕಲಿ ಆದೇಶಪತ್ರ ನೀಡಿರುವುದಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಯಲ್ಲಿ ಆ.1 ರಂದು ವಿಶೇಷ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಸೂಚಿಸಿದ್ದಾರೆ. ಹಾಗಾಗಿ ಶನಿವಾರ ಸ್ಥಳಕ್ಕೆ ಭೇಟಿದ ಮಂಜುನಾಥ ಅವರು ಸಂಗಮ ತರಕಾರಿ ಮಾರುಕಟ್ಟೆ, ಸಂತೆ ಮೈದಾನದಲ್ಲಿರುವ ಮಳಿಗೆಗಳನ್ನು ವೀಕ್ಷಿಸಿ ದಾಖಲೆಗಳನ್ನು ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್, ‘ಪ್ರಜಾವಾಣಿ’ ವರದಿಯನ್ನು ಜಿಲ್ಲಾಧಿಕಾರಿ ಗಂಭೀರವಾಗಿ ಪರಿಗಣಿಸಿದ್ದು, ಸ್ಪಷ್ಟ ವರದಿ ನೀಡಲು ಸೂಚಿಸಿದ್ದಾರೆ. ಸದ್ಯ ಪರಿಶೀಲನೆ ವೇಳೆಯಲ್ಲಿ ತರಕಾರಿ ಮಾರುಕಟ್ಟೆಯಲ್ಲಿರುವ ವ್ಯಾಪಾರಿಗಳಿಗೆ ಬಾಡಿಗೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಪುರಸಭೆಯಲ್ಲಿ ಯಾವುದೇ ದಾಖಲೆಗಳು ಇಲ್ಲದಿರುವುದು ಸ್ಪಷ್ಟವಾಗಿದ್ದು ಅನಧಿಕೃತವಾಗಿ ಅವುಗಳಲ್ಲಿರುವರನ್ನು ಹೊರಹಾಕುವಂತೆ ಮುಖ್ಯಾಧಿಕಾರಿಗೆ ತಾಕೀತು ಮಾಡಲಾಗಿದೆ ಎಂದು ಹೇಳಿದರು.

ಸಂತೆ ಮೈದಾನದಲ್ಲಿ ಉತ್ತರಾಭಿಮುಖವಾಗಿರುವ 13 ಮಳಿಗೆಗಳ ಪೈಕಿ 7 ಮಳಿಗೆಗಳಿಗೆ ಹರಾಜು ಪ್ರಕ್ರಿಯೆ ನಡೆಸಿಲ್ಲ. ಆದರೆ ಅದರಲ್ಲಿರುವ ವ್ಯಾಪಾರಿಗಳ ಬಳಿ ಆದೇಶಪತ್ರ ಇರುವುದು ಕಂಡುಬಂದಿದ್ದು ಅದರ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಿ 24 ಗಂಟೆಯಲ್ಲಿ ಮುಖ್ಯಾಧಿಕಾರಿಗೆ ವರದಿ ಕೊಡಬೇಕು. ಒಂದೊಮ್ಮೆ ಆದೇಶ ಪತ್ರ ಪುರಸಭೆ ನೀಡಿದ್ದಲ್ಲ ಎಂಬುದು ಕಂಡುಬಂದರೆ ಮುಲಾಜಿಲ್ಲದೆ 2019 ಜು.19ರ ಸರ್ಕಾರದ ಸುತ್ತೋಲೆ ಬಾಡಿಗೆಗೆ ನಿಯಮಗಳ ಪ್ರಕಾರ ಮಳಿಗೆಯಲ್ಲಿ ಇರುವವರುನ್ನು ಖಾಲಿ ಮಾಡಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದರು.

ಚರ್ಚೆಗೆ ಗ್ರಾಸವಾದ ಜಿಕೆ ಅಜ್ಜನ ಹೆಸರು!:

ಈ ಪ್ರಕರಣದಲ್ಲಿ ದಾಖಲೆ ತಿದ್ದಿ ಮುಚ್ಚಿಹಾಕುವ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳೇ ಮುಂದಾಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ‘ಪ್ರಜಾವಾಣಿ’ ಪ್ರತಿನಿಧಿ ಮಾಹಿತಿ ಕೇಳುತ್ತಿದ್ದಂತೆ ಬೆಚ್ಚಿಬಿದ್ದಿರುವ ಅಧಿಕಾರಿಗಳು ಹಗರಣಕ್ಕೆ ಇತಿಶ್ರಿ ಹಾಡಲು ಮುಂದಾಗಿದ್ದಾರೆ. ಹಾಲಿ ಮುಖ್ಯಾಧಿಕಾರಿ ವೆಂಕಟೇಶ ಬೀಳಗಿ ಹಾಗೂ ಕಂದಾಯ ನಿರೀಕ್ಷಕ ರಾಘವೇಂದ್ರ ಅವರದ್ದು ಎನ್ನಲಾದ ಧ್ವನಿಯ ಮಾದರಿಯ ಮೊಬೈಲ್ ಫೋನ್ ಸಂಭಾಷಣೆ ಆಡಿಯೊ ಜಾಲತಾಣಗಳಲ್ಲಿ ಹರಿದಾಡಿದ್ದು ಅದು ಜಿಲ್ಲಾಧಿಕಾರಿ ಗಮನಕ್ಕೂ ಬಂದಿದೆ. ಮುಖ್ಯಾಧಿಕಾರಿ ಧ್ವನಿಯಲ್ಲಿರುವಂತೆ ‘ಸಾಮಾನ್ಯ ಸಭೆ ನಡಾವಳಿಯಲ್ಲಿ ಮಳಿಗೆ ಬಾಡಿಗೆ ವಿಷಯ ಸೇರಿಲ್ಲವೆಂದರೆ ಸಮಸ್ಯೆಯಾಗಬಹುದು ಪ್ರೊಸಿಡಿಂಗ್ಸ್ ಮಾಡಿಲ್ಲವೆಂದರೆ ಈಗಲೇ ಮಾಡಿಸಿ. ‘ಜಿಕೆ ಅಜ್ಜ’ಗೆ ಹೇಳಿ ಏನಾದರೂ ಮಾಡಿ ಸರಿಮಾಡಿಸಿ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂದಾಯ ನಿರೀಕ್ಷಕ ರಾಘವೇಂದ್ರ ಧ್ವನಿಯಲ್ಲಿರುವ ‘ಸರ್ ನೀವೇನೂ ತಲೆ ಕೆಡಿಸಿಕೊಳ್ಳಬೇಡಿ ‘ಪ್ರಜಾವಾಣಿ’ ವರದಿಗಾರ ಪೋನ್ ಮಾಡಿದರೆ ಎತ್ತಲೇ ಬೇಡಿ ಕೇಳಿದರೆ ನನಗೆ ಏನೂ ಗೊತ್ತಿಲ್ಲ ಎಂದಷ್ಟೇ ಹೇಳ್ರಿ ನಾನೆಲ್ಲ ಸರಿಮಾಡುತ್ತೇನೆ. ಈಗಾಗಲೇ ‘ಜಿಕೆ ಅಜ್ಜ’ ಹ್ಯಾಂಡಲ್ ಮಾಡುತ್ತಿದ್ದಾನೆ’ ಎಂದಿದ್ದಾರೆ. ಈ ಸಂಭಾಷಣೆಯಲ್ಲಿ ಮೇಲಿಂದ ಮೇಲೆ ಜಿಕೆ ಅಜ್ಜ ಎಂದು ಪ್ರಸ್ತಾಪಿಸಿದ್ದು ಯಾರು ಈ ಅಜ್ಜ ಎನ್ನುವುದು ಪಟ್ಟಣದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.